ADVERTISEMENT

ನಾಡಹಬ್ಬದ ಅಂಗವಾಗಿ ಆಕರ್ಷಕ ಭಜನಾ ಪದಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 12:04 IST
Last Updated 4 ನವೆಂಬರ್ 2019, 12:04 IST
ಕಸಾಪ ಏರ್ಪಡಿಸಿದ್ದ ನಾಡಹಬ್ಬದಲ್ಲಿ ಬಸವನ ಸಂಗೋಳಗಿಯ ಬಸವೇಶ್ವರ ಭಜನಾ ಮಂಡಳಿ ಸದಸ್ಯರು ಭಜನಾ ಪದ ಪ್ರಸ್ತುತಪಡಿಸಿದರು
ಕಸಾಪ ಏರ್ಪಡಿಸಿದ್ದ ನಾಡಹಬ್ಬದಲ್ಲಿ ಬಸವನ ಸಂಗೋಳಗಿಯ ಬಸವೇಶ್ವರ ಭಜನಾ ಮಂಡಳಿ ಸದಸ್ಯರು ಭಜನಾ ಪದ ಪ್ರಸ್ತುತಪಡಿಸಿದರು   

ಕಲಬುರ್ಗಿ: ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ನಾಡಹಬ್ಬ’ ಜಿಲ್ಲೆಯ ವಿವಿಧ ಕಲಾತಂಡಗಳು ಆಕರ್ಷಕ ಭಜನೆಯನ್ನು ಪ್ರಸ್ತುತಪಡಿಸಿದವು.

ಎರಡು ದಿನಗಳ ಕಾಲ ಜಿಲ್ಲೆಯ ಪ್ರಮುಖ ಕಲೆಗಳನ್ನು ಪ್ರಸ್ತುತಪಡಿಸಲಾಯಿತು. ಬಸವನ ಸಂಗೋಳಗಿಯ ಬಸವೇಶ್ವರ ಭಜನಾ ಮಂಡಳಿಯ ಕಲಾವಿದರು ಮೊದಲು ವಿಘ್ನ ವಿನಾಯಕ ಗಜಮುಖ ಗಣನಾಥ ನಾಂದಿ ಪದವನ್ನು ಹಾಡಿದರು. ಇದಕ್ಕೆ ಹಿಮ್ಮೇಳನದ ರೂಪದಲ್ಲಿ ದೇಸಿ ವಾದ್ಯ ಪರಿಕರಗಳು ಪ್ರೇಕ್ಷಕರ ಮೈನವಿರೇಳಿಸಿದವು. ನಂತರ ಇದೇ ತಂಡದ ಕಲಾವಿದರು ‘ಬ್ರಹ್ಮ ಕಂಬಾರ ಮಾಡ್ಯಾನ ಗಡಗಿಯ ತಯ್ಯಾರ, ನಿರ್ಮಲ ಭಾವನೆ ನಿರಂಕಾರದಿಂದ ಅಡಗಿಯ ಮಾಡಬೇಕ್ರಿ’ ಎಂಬ ಸುಂದರ ಹಾಡನ್ನು ಪ್ರಸ್ತುತಪಡಿಸಿದರು.

ಕಸಾ‍ಪ ಅಧ್ಯಕ್ಷ ವೀರಭದ್ರ ಸಿಂಪಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.