ADVERTISEMENT

ಕಲಬುರ್ಗಿ: ಭೀಮಾ ನದಿಗೆ 40 ಸಾವಿರ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 9:50 IST
Last Updated 16 ಆಗಸ್ಟ್ 2020, 9:50 IST
ಸೊನ್ನ ಭೀಮಾ ಬ್ಯಾರೇಜ್
ಸೊನ್ನ ಭೀಮಾ ಬ್ಯಾರೇಜ್   

ಕಲಬುರ್ಗಿ: ಮಹಾರಾಷ್ಟ್ರದ ವೀರ್ ಅಣೆಕಟ್ಟೆಯಿಂದ ಬಿಡಲಾದ 40 ಸಾವಿರ ಕ್ಯುಸೆಕ್ ನೀರು ಭಾನುವಾರ ಜಿಲ್ಲೆಯ ಸೊನ್ನ ಭೀಮಾ ಬ್ಯಾರೇಜಿಗೆ ತಲುಪಿದ್ದು, ಅಷ್ಟೇ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಿದೆ.

ಅಫಜಲಪೂರ, ಚಿತ್ತಾಪುರ, ಜೇವರ್ಗಿ, ಸಿಂದಗಿ ತಾಲ್ಲೂಕಿನ ನದಿ ಪಾತ್ರದವರು ಎಚ್ಚರಿಕೆಯಿಂದಿರಲು ಭೀಮಾ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಕಲಾಲ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT