
ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಸಂಕ್ರಾಂತಿ ಹಿನ್ನೆಲೆ ಬುಧವಾರ ಸಹಸ್ರಾರು ಯಾತ್ರಿಕರು ಹಾಗೂ ಭಕ್ತಾದಿಗಳು ಭೀಮಾ ನದಿಯ ರುದ್ರಪಾದ ತೀರ್ಥ ತೀರದಲ್ಲಿ ಪರ್ವಕಾಲ ಸ್ನಾನ ಮಾಡಿದರು.
ನಿರ್ಗುಣ ಮಠದ ಕಾರ್ಯದರ್ಶಿ ಪ್ರಿಯಾಂಕ ಪೂಜಾರಿ ಮಾತನಾಡಿ, ‘ನದಿಗಳಲ್ಲಿ ಪರ್ವಕಾಲದಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ’ ಎಂದರು.
ಯಾತ್ರಿಕರು ಪುಣ್ಯ ಸ್ನಾನ ನಂತರ ದತ್ತಾತ್ರೇಯ ಮಹಾರಾಜರ ದರ್ಶನ ಪಡೆದರು. ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಬದಿಯಲ್ಲಿ ಹರಿಯುವ ಭೀಮಾ ನದಿಯಲ್ಲಿ ಭಕ್ತಾದಿಗಳು ಸಂಕ್ರಮಣದೊಂದು ಪುಣ್ಯಸ್ನಾನ ಮಾಡಿ ದೇವಿಯ ದರ್ಶನ ಪಡೆದರು. ಪ್ರಖ್ಯಾತ್ ಪೂಜಾರಿ, ನರಹರಿ ಪೂಜಾರಿ, ಪ್ರದುಮ್ನ ಪೂಜಾರಿ, ಅವಧೂತ ಪೂಜಾರಿ, ಸರ್ವೇಶ್ ಪೂಜಾರಿ, ಗುಂಡು ಪೂಜಾರಿ, ಕಿರಣ್ ಪೂಜಾರಿ, ಪ್ರತೀಕ್ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.