ADVERTISEMENT

ಗಣಾಪುರದಲ್ಲಿ ಭೂಮಿಯಿಂದ ಸ್ಪೋಟಕ ಸದ್ದು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 10:25 IST
Last Updated 28 ಅಕ್ಟೋಬರ್ 2020, 10:25 IST

ಚಿಂಚೋಳಿ(ಕಲಬುರ್ಗಿ ಜಿಲ್ಲೆ): ತಾಲ್ಲೂಕಿನಗಣಾಪುರ ಗ್ರಾಮದಲ್ಲಿ ಭೂಮಿಯಿಂದ ಸ್ಪೋಟಕ ರೀತಿಯ ಸದ್ದು ಮೂರು ದಿನಗಳಿಂದ ಕೇಳಿಬರುತ್ತಿದೆ ಎಂದುಗ್ರಾಮಸ್ಥರು ತಿಳಿಸಿದ್ದಾರೆ.

'ಅ.25ರಿಂದ ಭೂಮಿಯಿಂದ ಸದ್ದು ಕೇಳಿಸಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಎರಡು ಬೃಹತ್ ಸಿಮೆಂಟ ತಯಾರಿಕಾ ಘಟಕಗಳಿವೆ. ಇವುಗಳು ಸುಣ್ಣದ ಕಲ್ಲಿನ ಗಣಿಗಾರಿಕೆಗಾಗಿ ಸ್ಪೋಟಿಸಿರಬಹುದೆಂದು ಉಹಿಸಿ ಸುಮ್ಮನಾಗಿದ್ದೇವು ಆದರೆ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ 3/4ಬಾರಿ ಸದ್ದು ಕೇಳಿಸಿತು' ಎಂದು‌ ಗ್ರಾಮಸ್ಥರಾದ ಶಂಕರಯ್ಯ ಸ್ವಾಮಿ ರಾವೂರ ಮಠ ,ಗುಂಡಯ್ಯ ಸ್ವಾಮಿ ,ಅಮೃತಪ್ಪಾ ,ಶಿವಾನಂದ ಹಿರೇಮಠ ಮೊದಲಾದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT