ADVERTISEMENT

ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಹುಸಿ ಕರೆ ಪ್ರಕರಣ: ವ್ಯಕ್ತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 7:45 IST
Last Updated 15 ಡಿಸೆಂಬರ್ 2021, 7:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರಗಿ: ಬೆಂಗಳೂರು-ದೆಹಲಿ ಮಧ್ಯೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ (ಕೆ.ಕೆ) ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಸತ್ಯ ಎಂಬಾತನನ್ನು ಜಿಲ್ಲೆಯ ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಸತ್ಯನ ತಮ್ಮ ಮನೋಜಕುಮಾರ್ ಎಂಬಾತ ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಬೇಸತ್ತ ಪ್ರಯಾಣಿಕರು ರೈಲ್ವೆ ಟಿಟಿ ಅವರಿಗೆ ದೂರು ನೀಡಿದ್ದರು. ರೈಲ್ವೆ ‌ಬೋಗಿಗೆ ಬಂದ ಟಿಟಿ ಮನೋಜಕುಮಾರ್‌ಗೆ ದಂಡ‌ ವಿಧಿಸಿ ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ಅಣ್ಣ ಸತ್ಯನಿಗೆ ತಿಳಿಸಿದ್ದ.‌ ರೈಲ್ವೆ ಅಧಿಕಾರಿಗಳಿಗೆ ‌ಕರೆ ಮಾಡಿದ ಸತ್ಯ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ. ಈತ ಮದ್ಯಪಾನ ಮಾಡಿದ್ದ ‌ಎಂದು ಪೊಲೀಸರು ‌ತಿಳಿಸಿದ್ದಾರೆ.

ವಾಡಿಯಲ್ಲಿ ಸತ್ಯನನ್ನು ಇಳಿಸಿಕೊಂಡ ಪೊಲೀಸರು ಮತ್ತೊಂದು ರೈಲಿನಲ್ಲಿ ಬೆಂಗಳೂರಿಗೆ ಕರೆದೊಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.