
ಪ್ರಜಾವಾಣಿ ವಾರ್ತೆ
ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ₹10 ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ)ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ತಹಶೀಲ್ದಾರರು ನಡೆಸಿದ ಸಿವಿಲ್ ವ್ಯಾಜ್ಯದ ಆದೇಶ ಪ್ರತಿಯನ್ನು ನೀಡುವಂತೆ ಕಚನಳ್ಳಿ ತಾಂಡಾದ ಕಿಶನ್ ರಾಠೋಡ ಮನವಿ ಮಾಡಿದ್ದರು. ಲಂಚ ಕೊಟ್ಟರೆ ನೀಡುವುದಾಗಿ ಎಫ್ ಡಿಎ ಶಶಿಕಾಂತ ಜಂಜೀರ್ ಬೇಡಿಕೆ ಇಟ್ಟಿದ್ದ. ಇದರಿಂದ ಬೇಸತ್ತ ಕಿಶನ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚದ ಹಣ ಪಡೆಯುವಾಗಲೇ ದಾಳಿ ಮಾಡಿದ ಪೊಲೀಸರು ಲಂಚ ಪಡೆಯುವಾಗ ಆರೋಪಿಯನ್ನು ಶಶಿಕಾಂತನನ್ನು ಬಂಧಿಸಿದರು.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಮಾರ್ಗದರ್ಶನದಲ್ಲಿ ಇನ್ ಸ್ಪೆಕ್ಟರ್ ಅರುಣಕುಮಾರ್ ಮರಗುಂಡಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.