ADVERTISEMENT

ಸಂಕ್ಷಿಪ್ತ ಸುದ್ದಿ: ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 2:45 IST
Last Updated 6 ಫೆಬ್ರುವರಿ 2021, 2:45 IST

ಕಲಬುರ್ಗಿ: ‘ಸರ್ವರಿಗೂ ಸಂವಿಧಾನ’ ಯೋಜನೆಯಡಿ ರಂಗಾಯಣದಿಂದ ನಾಟಕ ಸಿದ್ಧಪಡಿಸಲು ಕಲಾವಿದರ ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲಾವಿದರಿಂದ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಫೆ. 9ರವರೆಗೆ ವಿಸ್ತರಿಸಲಾಗಿದೆ ಎಂದು ರಂಗಾಯಣದ (ಪ್ರಭಾರ) ಆಡಳಿತಾಧಿಕಾರಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಕಲಾವಿದರ ವಯೋಮಿತಿ 18 ರಿಂದ 40 ವರ್ಷ. ಈ ಕಲಾವಿದರನ್ನು ಹೊರಗುತ್ತಿಗೆ ಆಧಾರದ ಮೇಲೆತಾತ್ಕಾಲಿಕವಾಗಿ3ತಿಂಗಳಅವಧಿಗೆನೇಮಕಮಾಡಿಕೊಳ್ಳಲಾಗುತ್ತದೆ.www.rangayanakalaburagi.comವೆಬ್‍ಸೈಟ್‍ದಿಂದ ಅರ್ಜಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ, ‘ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕೃತಿಕ ಸಮುಚ್ಚಯ, ಸೇಡಂ ಶಹಾಬಾದ್‌ ವರ್ತುಲ ರಸ್ತೆ, ಕಲಬುರ್ಗಿ-585105’ ಈ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ08472-227735ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT