ADVERTISEMENT

ಆಳಂದ: ಬಸ್‌ ನಿರ್ವಾಹಕ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:24 IST
Last Updated 17 ಏಪ್ರಿಲ್ 2025, 16:24 IST
ಶರಣಬಸಪ್ಪ ವಾಲಿ
ಶರಣಬಸಪ್ಪ ವಾಲಿ   

ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ಬಸ್‌ ಘಟಕದ ನಿರ್ವಾಹಕ, ತಾಲ್ಲೂಕಿನ ಮದಗುಣಕಿ ಗ್ರಾಮದ ಶರಣಬಸಪ್ಪ ರಾಚಪ್ಪ ವಾಲಿ(45) ಪುಣೆಗೆ ತೆರಳಿದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟರು.

2010ರಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಯ ಸೇವೆಗೆ ಸೇರಿದ್ದರು. ಕಲಬುರಗಿ ಘಟಕ–1ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಕಲಬುರಗಿ–ಪುಣೆ ಸಂಚಾರ ಸೇವೆಯಲ್ಲಿ ತೆರಳಿದ್ದರು. ಬೆಳಿಗ್ಗೆ ಬಸ್‌ ಪುಣೆಯ ನಿಲ್ದಾಣಕ್ಕೆ ತಲುಪಿದ್ದಾಗ ಎದೆನೋವಿನಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರಿಗೆ ಗರ್ಭಿಣಿ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಸಾವಿನ ಸುದ್ದಿ ತಿಳಿದ ಕಲಬುರಗಿ ಬಸ್‌ ಘಟಕದ ಅಧಿಕಾರಿಗಳು ತಕ್ಷಣ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಬುಧವಾರ ಕರೆ ತರುವ ವ್ಯವಸ್ಥೆ ಮಾಡಿದ್ದರು. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಮದಗುಣಕಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಜರುಗಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.