
ಚಿಂಚೋಳಿ: ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಸರ್ಕಾರಿ ಪಿಯು ಕಾಲೇಜಿನ ಎದುರುಗಡೆ ಕುಟುಂಬ ಸ್ಕ್ಯಾನಿಂಗ್ ಮತ್ತು ಮೂಳೆ ರೋಗ ಆಸ್ಪತ್ರೆಯ ಶುಭಾರಂಭ ಸೋಮವಾರ ನಡೆಯಿತು.
ರೇಡಿಯಾಲಜಿ ತಜ್ಞ ವೈದ್ಯೆ ಡಾ.ಕಾವ್ಯ ಮಲ್ಲಪ್ಪ ಬಿರಾಪುರ, ಮೂಳೆ ರೋಗ ತಜ್ಞ ಡಾ.ಕಾರ್ತಿಕ ಅವರು ಪೂಜೆಯಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
‘ರೇಡಿಯಾಲಜಿ ತಜ್ಞರು ವಾರದಲ್ಲಿ ಮೂರು ದಿನ ಹಾಗೂ ಮೂಳೆ ತಜ್ಞ ವೈದ್ಯರು ಪ್ರತಿ ಬುಧವಾರ ಸೇವೆ ಲಭ್ಯವಿರುತ್ತಾರೆ’ ಎಂದು ಪುರಸಭೆ ಮಾಜಿ ಸದಸ್ಯೆ ಶ್ರೀದೇವಿ ಮಲ್ಕಪ್ಪ ಬಿರಾಪೂರ ತಿಳಿಸಿದರು.
ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಹಣಮಂತ ಪೂಜಾರಿ, ಕಾಳಗಿ ಅಧ್ಯಕ್ಷ ರೇವಣಸಿದ್ದಪ್ಪ ಅರಣಕಲ್, ಕೃಷ್ಣಾ ಬಿರಾಪುರ, ದಶರಥ ಬಿರಾಪುರ, ಆತ್ರೆಯ ಆಸ್ಪತ್ರೆಯ ವೈದ್ಯ ಡಾ.ಅಜಯ ಕಾಟಾಪುರ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇತ್ರ ತಜ್ಞರಾದ ಡಾ.ಅಬ್ದುಲ್ ಅಜೀಜ್, ಡಾ.ಮಂಜುನಾಥ ರಾಠೋಡ, ಮುಖಂಡರಾದ ಕೆ.ಎಂ.ಬಾರಿ, ಸಂತೋಷ ಗಡಂತಿ, ನಾಗೇಶ ಗುಣಾಜಿ, ಭೀಮಶೆಟ್ಟಿ ಜಾಬಶೆಟ್ಟಿ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.