ADVERTISEMENT

ಚಿಂಚೋಳಿ | ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ಐದು ವರ್ಷಗಳಿಂದ ಸಿಗದ ಪ್ರೋತ್ಸಾಹ ಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:16 IST
Last Updated 6 ಜುಲೈ 2025, 7:16 IST
ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯ ಹೊಲದಲ್ಲಿ ನೆಟ್ಟಿರುವ ಸಸಿಗಳು ಬೆಳೆದು ನಿಂತಿರುವುದು ಮುಖಂಡ ಗೋಪಾಲ ಗಾರಂಪಳ್ಳಿ ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯ ಹೊಲದಲ್ಲಿ ನೆಟ್ಟಿರುವ ಸಸಿಗಳು ಬೆಳೆದು ನಿಂತಿರುವುದು ಮುಖಂಡ ಗೋಪಾಲ ಗಾರಂಪಳ್ಳಿ ಪರಿಶೀಲಿಸಿದರು   

ಚಿಂಚೋಳಿ: ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಕಳೆದ 5 ವರ್ಷಗಳಿಂದ ರೈತರಿಗೆ ಸಹಾಯಧನ ಸಿಕ್ಕಿಲ್ಲ’ ಎಂದು ಬಹುಜನ ಮೂಲ ನಿವಾಸಿಗಳ ಸಂಘದ ಮುಖಂಡ ಗೋಪಾಲ ಎಂ. ಪೂಜಾರಿ ದೂರಿದ್ದಾರೆ.

‘ಅರಣ್ಯ ಇಲಾಖೆಯ ಪ್ರೋತ್ಸಾಹ ಧನ ಸಿಗಲಿದೆ ಎಂದು ಎಲ್ಲಾ ಕೆಲಸ ಬಿಟ್ಟು ಸಸಿಗಳನ್ನು ನೆಟ್ಟು ಪೋಷಿಸಿದ್ದೇನೆ. ಹೊಲದಲ್ಲಿ ಬೇರೆ ಬೆಳೆಗಳನ್ನು ಬೆಳೆಯದೇ ಸಸಿಗಳನ್ನು ಉಳಿಸಿಕೊಂಡಿದ್ದೇನೆ. ಆದರೆ ಅರಣ್ಯ ಇಲಾಖೆ ಸಕಾಲದಲ್ಲಿ ರೈತ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ’ ಎಂದು ಆರೋಪಿಸಿದ್ದಾರೆ.

2019-20ರಲ್ಲಿ 47 ರೈತರು 23,944 ಸಸಿಗಳನ್ನು, 2020-21ರಲ್ಲಿ 106 ರೈತರು 41,667 ಸಸಿಗಳನ್ನು, 2021-22ರಲ್ಲಿ 50 ರೈತರು 16,200 ಸಸಿಗಳನ್ನು 2022-23ರಲ್ಲಿ 41 ರೈತರು 16,705 ಸಸಿಗಳನ್ನು, 2023-24ರಲ್ಲಿ 33 ರೈತರು 17,277 ಸಸಿಗಳನ್ನು ನೆಟ್ಟಿದ್ದಾರೆ.

ADVERTISEMENT

‘ಇವರಿಗೆ ಮೊದಲ ವರ್ಷ ಬದುಕುಳಿದ ಪ್ರತಿಗೆ ₹10, ಎರಡನೇ ವರ್ಷ ₹15, ಮೂರನೇ ವರ್ಷ ₹20 ಹೀಗೆ ರೈತರಿಗೆ ಪ್ರೋತ್ಸಾಹ ಧನ ಅರಣ್ಯ ಇಲಾಖೆಯಿಂದ ನೀಡಲಾಗತ್ತದೆ. ಇದನ್ನು ನಂಬಿ ಸಸಿ ನೆಟ್ಟು ಬೆಳೆಸಿಕೊಂಡ ರೈತರು ಅನ್ಯ ಬೆಳೆ ಬೆಳೆಯದೇ ಕೈ ಸುಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಳೆದ 5 ವರ್ಷಗಳಿಂದ ಅನುದಾನ ಬಂದಿಲ್ಲ ಬಂದ ಮೇಲೆ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಜಗನ್ನಾಥ ಕೊರಳ್ಳಿ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಸಹಾಯಧನ ಬಿಡುಗಡೆಗೆ ಮೇಲಧಿಕಾರಿಗಳಿಗೆ ವಿವರವಾದ ವರದಿ ನೀಡಿದ್ದೇವೆ. ಅನುದಾನ ಬಂದ ತಕ್ಷಣ ರೈತರ ಖಾತೆಗೆ ಜಮೆ ಮಾಡುತ್ತೇವೆ
ಜಗನ್ನಾಥ ಕೊರಳ್ಳಿ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಅರಣ್ಯ ವಲಯ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.