ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಬ್ರಿಜ್ ಕಂ ಬ್ಯಾರೇಜು ಮುಳುಗಿರುವುದು
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಮುಲ್ಲಾಮಾರಿ ನದಿ ತುಂಬಿ ಹರಿಯುತ್ತಿದೆ.
ಇದರಿಂದ ಜಲಾಶಯದ ಕೆಳ ಭಾಗದ ನದಿ ಪಾತ್ರದಲ್ಲಿ ಬರುವ ಹಲವು ಗ್ರಾಮಗಳ ಸೇತುವೆಗಳು ಹಾಗೂ ಬ್ರಿಜ್ ಕಂ ಬ್ಯಾರೇಜು ಮುಳುಗಡೆಯಾಗಿವೆ.
ತಾಲ್ಲೂಕಿನ ಚಿಮ್ಮನಚೋಡ, ತಾಜಲಾಪುರ ಮತ್ತು ಗಾರಂಪಳ್ಳಿ ಸೇತುವೆ ಮುಳುಗಿದರೆ, ಕನಕಪುರ ಹಳೆ, ಹೊಸ, ಗೌಡನಹಳ್ಳಿ, ನೀಮಾಹೊಸಳ್ಳಿ, ಚಂದಾಪುರ, ಪೋಲಕಪಳ್ಳಿ, ಅಣವಾರ, ಗರಗಪಳ್ಳಿ, ಬುರುಗಪಳ್ಳಿ ಬ್ರಿಜ್ ಕಂ ಬ್ಯಾರೇಜು ಮುಳುಗಿವೆ.
ಬ್ಯಾರೇಜಿನ ಮೇಲೆ ನೀರು ಹರಿಯುತ್ತಿದ್ದರೆ ಇನ್ನೂ ಕೆಲವು ಬ್ಯಾರೇಜುಗಳ ಸೇತುವೆಯ ಬೆಡಗೆ ನೀರು ತಾಗುತ್ತ ಹರಿಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸೇತುವೆ ಎದುರಿಗೆ ಬ್ಯಾರಿಕೇಡ್ ಇರಿಸಿ ನೀರಲ್ಲಿ ತೆರಳದಂತೆ ಕ್ರಮವಹಿಸಿದ್ದು ತಾಜಲಾಪುರದಲ್ಲಿ ಗೋಚರಿಸಿತು.ಸದ್ಯ ಜಲಾಶಯದ ನೀರಿನಮಟ್ಟ 490.05 ಮೀಟರ್ ಗಳಷ್ಟಿದ್ದು, ಒಳ ಹರಿವು 1900 ಕ್ಯೂಸೆಕ್, ಹೊರ ಹರಿವು 2500 ಕ್ಯೂಸೆಕ್ ಇದೆ ಎಂದು ಯೋಜನೆಯ ಶಾಖಾಧಿಕಾರಿ ವಿನಾಯಕ ಚವ್ಹಾಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.