ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಡಾ.ದಾವೂದ್ ಪಟೇಲ್ ಅವರು ತಮ್ಮ ಪತ್ನಿಯ ಸ್ಮರಣಾರ್ಥ ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 500 ಜನರ ತಪಾಸಣೆ ಮಾಡಿ, ಉಚಿತವಾಗಿ ಔಷಧ ವಿತರಣೆ ಮಾಡಲಾಯಿತು.
ಡಾ.ದಾವೂದ್ ಪಟೇಲ್ ಮಾತನಾಡಿ, ‘ಬಡವರಿಗೆ ಅನುಕೂಲವಾದರೆ ಶಿಬಿರದ ಉದ್ದೇಶ ಸಾರ್ಥಕವಾಗುತ್ತದೆ. ಕಲಬುರಗಿ, ಹೈದರಾಬಾದ್‌ನ ತಜ್ಞ ವೈದ್ಯರು ಇಸಿಜಿ, ರಕ್ತ, ಸಕ್ಕರೆ ಕಾಯಿಲೆ, ಮಕ್ಕಳ ಆರೋಗ್ಯ, ಸಾಮಾನ್ಯ ರೋಗಗಳ ತಪಾಸಣೆ ಮಾಡಿದ್ದಾರೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಪಾಳೇದಕರ್, ಮುಖಂಡರಾದ ಬಸವರಾಜ ವಾರದ, ರಸೀದ್ ಪಠಾಣ್, ಹಮೀದ್ ಯಾದಗಿರಿ, ಮುನಿಯಪ್ಪ ಕೊಳ್ಳಿ, ಮಹೇಶ ಮುಕೆ, ನಾಗಣ್ಣ ವಾರದ, ಶಂಕರ ಕೊಳ್ಳಿ, ಶಿವಕುಮಾರ ಪಾಳೇದಕರ್, ಹಣಮಂತ ಭರಾಟೆ, ಮಹ್ಮದ್ ಇಸಾಕ್ ಯಾದಗಿರಿ, ಡಾ.ರಿಜ್ವಾನ್, ಡಾ. ತಬರೇಜ್ ಅಹ್ಮದ್, ಡಾ.ಮಹ್ಮದ್ ಜುಬೇರ್, ಡಾ.ಅಬ್ದುಲ್ ಖಾದರ್ ಜೀಲಾನಿ, ಡಾ.ಹಮೀಮ್ ಫಾರೂಕ್ ಇಸ್ಲಾಂ, ಡಾ.ಸೈಯದಾ ಅದೀಬಾ ತಸನೀಮ್, ರೇವಣಸಿದ್ದ ಕವಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.