ADVERTISEMENT

ಟಿಪ‍್ಪ‍ರ್‌– ಲಾರಿ ಡಿಕ್ಕಿ: ಕ್ಲೀನರ್‌ ಸಾವು, ಚಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 5:17 IST
Last Updated 6 ಡಿಸೆಂಬರ್ 2020, 5:17 IST

ಕಲಬುರ್ಗಿ: ನಗರದ ಜೇವರ್ಗಿ ರಸ್ತೆಯ ಫಹರತಾಬಾದ್‌– ಸರಡಗಿ ನಡುವೆ ಶನಿವಾರ ಲಾರಿ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.

ಆಳಂದ ಪಟ್ಟಣದ ನಿವಾಸಿ ಪ್ರಭಾಕರ (40) ಮೃತಪ‍ಟ್ಟ ಕ್ಲೀನರ್‌. ಗಾಯಗೊಂಡ ಲಾರಿ ಚಾಲಕ ಶಹಾಬುದ್ದೀನ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.