ಚಿತ್ತಾಪುರ: ‘ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವದ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವ ಮೂಲಕ ಸಮಾಜಕ್ಕೆ ಸಹಕರಿಸಬೇಕು’ ಎಂದು ತಾಲ್ಲೂಕು ಕೋಲಿ ಸಮಾಜದ ಮುಖಂಡರು ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಅವರ ನೇತೃತ್ವದಲ್ಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ, ನೂತನ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಲಚ್ಚಪ್ಪ ಜಮಾದಾರ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರು ಸೇರಿದಂತೆ ಸಮಾಜದ ಮುಖಂಡರು ಸಂಸದರನ್ನು ಭೇಟಿ ಮಾಡಿ ಎಸ್.ಟಿ ಪಟ್ಟಿಗೆ ಸೇರುವ ಸಂಬಂಧ ಕೋಲಿ ಸಮಾಜಕ್ಕೆ ನಿಮ್ಮ ಸಹಕಾರ ಅಗತ್ಯವಿದೆ, ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ರಾಜ್ಯದಿಂದ ಪ್ರಸ್ತಾವ ಬಂದಾಗ ಖಂಡಿತ ಗಮನ ಹರಿಸುತ್ತೇವೆ ಎಂದು ಸಂಸದ ರಾಧಾಕೃಷ್ಣ ಅವರು ತಿಳಿಸಿದರು.
ಕೋಲಿ ಸಮಾಜದ ನೂತನ ಅಧ್ಯಕ್ಷರಾದ ನಿಂಗಣ್ಣಾ ಹೆಗಲೇರಿ, ಪ್ರಭು ಹಲಕರ್ಟಿ ಅವರು ಸಮಾಜದ ವತಿಯಿಂದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಮುಖಂಡರಾದ ಭೀಮಣ್ಣಾ ಹೋತಿನಮಡಿ, ಪಿಂಟು ಜಮಾದಾರ, ಲಕ್ಷ್ಮಿಕಾಂತ ಸಾಲಿ, ಹಣಮಂತ ಕಟ್ಟಿಮನಿ, ಕರಣಕುಮಾರ ಅಲ್ಲೂರ್, ರಾಜೇಶ ಹೋಳಿಕಟ್ಟಿ, ಶಿವಶರಣ ಮೆಂಗಾನೋರ, ಅಶೋಕ ಬಾನರ, ಸುರೇಶ ಗುತ್ತೆದಾರ್ ಅವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.