ADVERTISEMENT

ಅಗಲಿದ ಗಣ್ಯರಿಗೆ ಶರಣಾಂಜಲಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:41 IST
Last Updated 25 ಸೆಪ್ಟೆಂಬರ್ 2020, 16:41 IST
ಕಲಬುರ್ಗಿಯ ಡಾ.ಎಂ.ಎಂ.ಕಲಬುರಗಿ ವಿಚಾರ ವೇದಿಕೆ ಮತ್ತು ಬಸವಪರ ಸಂಘಟನೆಗಳಿಂದ ಶುಕ್ರವಾರ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ನಾರಾಯಣರಾವ್ ಅವರಿಗೆ ಭಾವಪೂರ್ಣ ಶರಣಾಂಜಲಿ ಸಲ್ಲಿಸಲಾಯಿತು
ಕಲಬುರ್ಗಿಯ ಡಾ.ಎಂ.ಎಂ.ಕಲಬುರಗಿ ವಿಚಾರ ವೇದಿಕೆ ಮತ್ತು ಬಸವಪರ ಸಂಘಟನೆಗಳಿಂದ ಶುಕ್ರವಾರ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ನಾರಾಯಣರಾವ್ ಅವರಿಗೆ ಭಾವಪೂರ್ಣ ಶರಣಾಂಜಲಿ ಸಲ್ಲಿಸಲಾಯಿತು   

ಕಲಬುರ್ಗಿ: ‘ಹುಟ್ಟಿದಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಆದರೆ, ನಾವು ಸತ್ತಾಗ ಉಸಿರು ಇಲ್ಲದಿದ್ದರೂ ಹೆಸರು ಉಳಿಯಬೇಕು ಎಂಬ ಮಾತಿಗೆ, ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಅವರು ಪ್ರತ್ಯಕ್ಷ ಉದಾಹರಣೆ ಆಗಿದ್ದಾರೆ’ ಎಂದು ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ಪುತ್ಥಳಿ ಬಳಿ ಶುಕ್ರವಾರ, ಇಲ್ಲಿನ ಡಾ.ಎಂ.ಎಂ.ಕಲಬುರಗಿ ವಿಚಾರ ವೇದಿಕೆ ಮತ್ತು ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಭಾವಪೂರ್ಣ ಶರಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘12ನೇ ಶತಮಾನದ ಬಸವಾದಿ ಶರಣರ ತತ್ವಗಳನ್ನು ಅರಿತುಕೊಂಡು ಅದೇ ತೆರನಾಗಿ ಬಾಳಿದ ಅಪರೂಪದ ವ್ಯಕ್ತಿಗಳಾಗಿದ್ದ ಇವರು, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಡಿದವರು. ಬಡವರು, ನಿರ್ಗತಿಕರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಈ ಇಬ್ಬರ ನಿಧನದಿಂದ ಬಸವಾನುಯಾಯಿಗಳಿಗೆ ಅತೀವ ನೋವಾಗಿದೆ’ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷ ರಾಜಶೇಖರ ಯಂಕಂಚಿ, ಬಸವಾನುಯಾಯಿ ನೀಲಕಂಠ ಆವಂಟಿ ಅಗಲಿದ ಗಣ್ಯರ ಗುಣಗಾನ ಮಾಡಿದರು.‌ ವೇದಿಕೆ ಅಧ್ಯಕ್ಷ ಮಹಾಂತೇಶ ಕಲಬುರಗಿ, ಪ್ರಮುಖರಾದ ಅಯ್ಯಣ್ಣಗೌಡ ಪಾಟೀಲ, ಶಿವಶರಣ ದೇಗಾಂವ ಜಂಬಗಾ, ಅಶೋಕ ಗೋಧಿ, ಶಶಿಕಾಂತ ಪಸಾರ, ನರಸಿಂಗರಾವ ಹೇಮನೂರ, ಧನರಾಜ್ ತಾಂಬೋಳೆ, ರೇವಣಸಿದ್ದಯ್ಯಾ ಸ್ವಾಮಿ ಕರಕಮುಕಲಿ, ಅಶೋಕ ಘೂಳಿ, ಬಸವರಾಜ ಧೂಳಾಗುಂಡಿ, ಮನೋಹರ ಜೀವಣಗಿ, ಸಿದ್ಧಣ್ಣ ಅಂಗಡಿ ಅನೇಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.