ADVERTISEMENT

ನಿಮ್ಮ ದರ್ಶನ ಪಡೆದು ಮತಯಾಚಿಸಲು ಬಂದಿದ್ದೇನೆ

ಕಾಂಗ್ರೆಸ್–ಜೆಡಿಎಸ್ ವೀರಶೈವ ಲಿಂಗಾಯತರ ಸಭೆಯಲ್ಲಿ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:35 IST
Last Updated 13 ಏಪ್ರಿಲ್ 2019, 7:35 IST
ವೀರಶೈವ ಲಿಂಗಾಯತರ ಪ್ರಚಾರ ಸಭೆಯಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ, ಗೃಹ ಸಚಿವ ಎಂ.ಬಿ.ಪಾಟೀಲ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು
ವೀರಶೈವ ಲಿಂಗಾಯತರ ಪ್ರಚಾರ ಸಭೆಯಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ, ಗೃಹ ಸಚಿವ ಎಂ.ಬಿ.ಪಾಟೀಲ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು   

‘ಕಾಂಗ್ರೆಸ್‌ನಲ್ಲಿ ಈಗ ಹುಟ್ಟಿದ್ದೇನೆ’ ‘ಶಾಣಪ್ಪ ಯಾವಾಗ ಕಾಂಗ್ರೆಸ್‌ಗೆ ಯಾವಾಗ ಬಂದಾ’ ಎಂದು ಕೆಲವರು ನನ್ನನ್ನು ಕೇಳುತ್ತಿದ್ದಾರೆ. ‘ನಾನು ಕಾಂಗ್ರೆಸ್‌ನಲ್ಲಿ ಈಗ ಹುಟ್ಟಿದ್ದೇನೆ ಎಂದು ಅವರಿಗೆ ಹೇಳುತ್ತಿದ್ದೇನೆ’ ಎಂದು ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಹೇಳಿದಾಗ ಸಭೆ ನಗೆಯಲ್ಲಿ ತೇಲಿತು.

‘ಸೋತ ಪೈಲ್ವಾನರ ಸಂಘ’ ‘ಸೋತ ಪೈಲ್ವಾನರೆಲ್ಲಾ ಸೇರಿ, ಸಂಘ ಮಾಡಿಕೊಂಡು ನನ್ನನ್ನು ಸೋಲಿಸಲು ಹೊರಟಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು. ‘ಖರ್ಗೆನ ಸೋಲಿಸಬೇಕು, ಖರ್ಗೆನ ಸೋಲಿಸಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಯಾಕೆ ಸೋಲಿಸಬೇಕು ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ನಿಮ್ಮ ಆಶೀರ್ವಾದ ನನ್ನ ಮೇಲಿರುವವರೆಗೆ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ಯಾರು ಏನೆಂದರು?
ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಆದ್ಯತೆ. 371 (ಜೆ) ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕೊಟ್ಟಿರುವ ದೊಡ್ಡ ಕೊಡುಗೆ. ಎಲ್ಲರಿಗೂ ಉಪಯುಕ್ತವಾಗಿದೆ.

ADVERTISEMENT

ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಮುಖಂಡ

ಇದು ಖರ್ಗೆ ಅವರ ಚುನಾವಣೆ ಅಲ್ಲ. ಬಂಡವಾಳಶಾಹಿಗಳು, ಕೋಮುವಾದಿಗಳು ಮತ್ತು ಸಂವಿಧಾನ ರಕ್ಷಣೆಯ ಮಧ್ಯದ ಚುನಾವಣೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರೇ ಇವತ್ತು ಆ ಪಕ್ಷದಲ್ಲಿ ಇಲ್ಲ.

ಬಿ.ಆರ್.ಪಾಟೀಲ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.