ADVERTISEMENT

ಕಾಂಗ್ರೆಸ್ ತೆಕ್ಕೆಗೆ ಚಿತ್ತಾಪುರ ಎಪಿಎಂಸಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:21 IST
Last Updated 1 ಅಕ್ಟೋಬರ್ 2020, 8:21 IST
ಚಿತ್ತಾಪುರ ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ಧುಗೌಡ, ಉಪಾಧ್ಯಕ್ಷೆಯಾಗಿ ದೇವಿಂದ್ರಮ್ಮ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿ ಕಾಂಗ್ರೆಸ್ ಮುಖಂಡರೊಂದಿಗೆ ಸಂಭ್ರಮಿಸಿದರು
ಚಿತ್ತಾಪುರ ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ಧುಗೌಡ, ಉಪಾಧ್ಯಕ್ಷೆಯಾಗಿ ದೇವಿಂದ್ರಮ್ಮ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿ ಕಾಂಗ್ರೆಸ್ ಮುಖಂಡರೊಂದಿಗೆ ಸಂಭ್ರಮಿಸಿದರು   

ಚಿತ್ತಾಪುರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಭಂಕೂರು ಕ್ಷೇತ್ರದ ಸದಸ್ಯ ಸಿದ್ದುಗೌಡ ಅಫಜಲಪುರಕರ್ ಮತ್ತು ಉಪಾಧ್ಯಕ್ಷೆಯಾಗಿ ತೆಂಗಳಿ ಕ್ಷೇತ್ರದ ಸದಸ್ಯೆ ದೇವಿಂದ್ರಮ್ಮ ದೇವಿಂದಪ್ಪ ಅವರು ಬುಧವಾರ ಇಲ್ಲಿ ಅವಿರೋಧವಾಗಿ ಆಯ್ಕೆಯಾದರು.

ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಚುನಾವಣೆ ಅಧಿಕಾರಿಯಾಗಿದ್ದರು.

13 ಜನ ಸದಸ್ಯರಲ್ಲಿ 9 ಜನ ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ನಾಲ್ವರು ಸದಸ್ಯರು ಚುನಾವಣೆಯಿಂದ ದೂರ ಉಳಿದಿದ್ದರು. ಸದಸ್ಯರಾದ ಶಿವರೆಡ್ಡಿ ಸೋಮರೆಡ್ಡಿ, ಮನಸ್ಊರ್ ಪಟೇಲ್, ಜಯಶ್ರೀ ಭೀಮಣ್ಣ ಸಾಲಿ, ಬಸವರಾಜ ಸಜ್ಜನ್, ವಿಶ್ವರಾಧ್ಯ ಬಿರಾಳ, ಭೀಮರಾವ್ ಮಾವನೂರ, ಶಾಮ್ ಮುಕ್ತೆದಾರ್ ಅವರು ಉಪಸ್ಥಿತರಿದ್ದರು.

ADVERTISEMENT

ಸಲಹೆ: ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ರೈತರ ಸಮಗ್ರ ಅಭಿವೃದ್ಧಿಗೆ ಕಳಕಳಿಯಿಂದ ಶ್ರಮಿಸಬೇಕು ಎಂದರು.

ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ಸಹಾಯಕ ಕಾರ್ಯದರ್ಶಿ ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ, ಜಿ.ಪಂ ಮಾಜಿ ಅಧ್ಯಕ್ಷ ರಮೇಶ ಪಾಟೀಲ್ ಮರಗೋಳ, ಮುಖಂಡರಾದ ಶ್ರೀನಿವಾಸ ಸಗರ, ಅಜೀಜ್ ಶೇಠ್, ಶಂಕ್ರಯ್ಯ ಸ್ವಾಮಿ, ಶಿವರಾಜ ಪಾಟೀಲ್ ಕಲಗುರ್ತಿ, ಶೇಖ್ ಬಬ್ಲು ಇದ್ದರು. ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದಿಂದ ಸನ್ಮಾನಿಸಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.