ಕಲಬುರಗಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾವಚಿತ್ರವನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಟ್ಲರ್‌ಗೆ ಹೋಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಸೋಮವಾರ ಇಲ್ಲಿಯ ನಾಗನಹಳ್ಳಿ ಕ್ರಾಸ್‌ನಿಂದ ಮೆರವಣಿಗೆ ನಡೆಸಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.
‘ಇಂದಿರಾ ಗಾಂಧಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಬಡವರ ಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶದ ಅಸಂಖ್ಯಾತ ಜನ ಇಂದಿಗೂ ಅವರನ್ನು ನಿತ್ಯ ಸ್ಮರಿಸುತ್ತಾರೆ. ಉಕ್ಕಿನ ಮಹಿಳೆಯ ಭಾವಚಿತ್ರವನ್ನು ವಿರೂಪಗೊಳಿಸಿರುವುದು ಸ್ತ್ರೀಯರಿಗೆ ಮಾಡಿರುವ ಅಪಮಾನ’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.
ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಶಕೀಲ್ ಸರಡಗಿ, ಈರಣ್ಣ ಪಾಟೀಲ ಝಳಕಿ, ಶಿವಾನಂದ ಹೊನಗುಂಟಿ, ಅಮರ ಶಿರವಾಳ, ಪರಶುರಾಮ ನಾಟಿಕಾರ, ಕಾರ್ತಿಕ್ ನಾಟಿಕಾರ, ರಾಜು ಮಳಗಿ, ಟೈಗರ್ ವಿಘ್ನೇಶ್ವರ, ಗಣೇಶ ನಾಗನಹಳ್ಳಿ, ಅಸ್ಲಾಂ ಸಿಂದಗಿ, ಮೊಹಮ್ಮದ್ ಅಸ್ವಾನ್, ಶರಫೋದ್ದಿನ್ ಮಿಸ್ತ್ರಿ, ಕಾರ್ತಿಕ್ ಹೊಸಮನಿ, ಕಿರಣ್ ಚವ್ಹಾಣ, ರಾಮಪ್ರಸಾದ್ ಕಾಂಬಳೆ, ಶೇಖ್ ಸಮರಿನ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.