ADVERTISEMENT

ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 10:06 IST
Last Updated 3 ಜೂನ್ 2020, 10:06 IST
ಶಹಾಬಾದ್‌ನಲ್ಲಿ ಕರ್ನಾಟಕ ಬಿಕ್ಕು ಸಂಘ ವತಿಯಿಂದ ತಹಶೀಲ್ದಾರ್‌ ಮುಖಾಂತರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಗೆ ಮನವಿ ಕಳುಹಿಸಲಾಯಿತು
ಶಹಾಬಾದ್‌ನಲ್ಲಿ ಕರ್ನಾಟಕ ಬಿಕ್ಕು ಸಂಘ ವತಿಯಿಂದ ತಹಶೀಲ್ದಾರ್‌ ಮುಖಾಂತರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಗೆ ಮನವಿ ಕಳುಹಿಸಲಾಯಿತು   

ಶಹಾಬಾದ್‌: ಅಯೋಧ್ಯೆಯಲ್ಲಿ ಸಿಕ್ಕಿರುವ ಭಗವಾನ್ ಗೌತಮ ಬುದ್ಧರ ಅವಶೇಷಗಳನ್ನು ಸಂರಕ್ಷಿಸಬೇಕು ಮತ್ತು ಅಲ್ಲಿಯೇ ಬೌದ್ಧ ವಿಹಾರ ನಿರ್ಮಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಿಕ್ಕು ಸಂಘ ವತಿಯಿಂದ ತಹಶೀಲ್ದಾರ್‌ ಮುಖಾಂತರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರಿಗೆ ಮಂಗಳವಾರ ಇಲ್ಲಿ ಮನವಿ ಪತ್ರ ಕಳುಹಿಸಲಾಯಿತು.

ಬೀದರ್‌ನ ಅಣದೂರ ಬುದ್ಧ ವಿಹಾರದ ವರಜ್ಯೋತಿ ಭಂತೇಜಿ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ತಳಪಾಯ ಅಗೆಯಲು ಪ್ರಾರಂಭಿಸುತ್ತಿದ್ದಂತೆ ಅಗಾಧ ಪ್ರಮಾಣದಲ್ಲಿ ಬುದ್ಧನ ಮೂರ್ತಿಗಳು, ದಮ್ಮ ಚಕ್ರದ ಶಿಲೆಗಳು, ಶಾಸನಗಳು ಮತ್ತಿತರ ಬೌದ್ಧ ಅವಶೇಷಗಳು ಅಗೆದಷ್ಟು ಹೊರಬರುತ್ತಲೇ ಇವೆ. ಹಾಗಾಗಿ ಅಯೋಧ್ಯೆಯ ಆ ಭೂಮಿಯನ್ನು ಬುದ್ಧ ಭೂಮಿಯೆಂದು ಘೋಷಿಸಿ ಬುದ್ಧ ವಿಹಾರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಡಾ.ಮಲ್ಲೇಶಿ ಸಜ್ಜನ್, ಸುರೇಶ ಮೆಂಗನ್, ಭರತ್ ಧನ್ನಾ, ಶರಣು ಸೂಗೂರ್, ಸಿದ್ರಾಮ ಉದಯಕರ್, ಶರಣು ಧನ್ನೇಕರ್, ಶಿವಶಾಲ ಪಟ್ಟಣಕರ್, ಸಂತೋಷ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.