ಕಲಬುರಗಿ: ಇಲ್ಲಿನ ತಿಲಕನಗರ ಕ್ಷೇಮಾಭಿವೃದ್ಧಿ ಸಂಘ, ಪತಂಜಲಿ ಯೋಗ ಕೇಂದ್ರ ಹಾಗೂ ಓಂ ಶಿವ ಯೋಗ ಬಳಗದ ಆಶ್ರಯದಲ್ಲಿ ನ. 18ರಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಅವರೊಂದಿಗೆ ‘ನಮ್ಮೊಂದಿಗೆ ಬೆಳಗಿನ ಮಾತು– ಕತೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಕುಸನೂರು ರಸ್ತೆಗೆ ಹೊಂದಿಕೊಂಡ ತಿಲಕನಗರದ ಜಿಡಿಎ ಉದ್ಯಾನದ ಬಳಿ ಇರುವ ‘ಶಿವ ಸಾಂಸ್ಕೃತಿಕ ವೇದಿಕೆ– ಶಿವಮಂದಿರ’ ಇಲ್ಲಿ ನಡೆಯಲಿದೆ ಎಂದು ತಿಲಕನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಜಾಲಿಹಾಳ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9342356222 ಸಂಪರ್ಕಿಸಲು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.