ADVERTISEMENT

ಸಮಾಜಮುಖಿ ಚಿಂತನೆ ಕಾವ್ಯದ ಹೂರಣವಾಗಲಿ

ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:13 IST
Last Updated 8 ಅಕ್ಟೋಬರ್ 2024, 16:13 IST
ಕಲಬುರಗಿ ನಗರದ ಕನ್ನಡ ಭವನದಲ್ಲಿ ನಡೆದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಮಾತನಾಡಿದರು
ಕಲಬುರಗಿ ನಗರದ ಕನ್ನಡ ಭವನದಲ್ಲಿ ನಡೆದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಮಾತನಾಡಿದರು   

ಕಲಬುರಗಿ: ‘ಸಮಾಜಮುಖಿ ಚಿಂತನೆ ಕಾವ್ಯದ ಹೂರಣವಾಗಲಿ’ ಎಂದು ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸಾಹಿತ್ಯ ಮಂಟಪದಲ್ಲಿ ಮಂಗಳವಾರ ನಡೆದ ದಸರಾ ಕಾವ್ಯ ಸಂಭ್ರಮ–2024ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾವ್ಯ ನಮ್ಮ ಮನಸ್ಸು ಕಟ್ಟಿ ಅರಳಿಸುತ್ತದೆ. ಜೀವ–ಭಾವ ಒಂದಾಗಿಸುತ್ತದೆ. ಅಂಥ ತುಡಿತದ ಕಾವ್ಯಗಳು ಸಂಭ್ರಮಿಸಬೇಕು’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಕವಿಯಾದವನು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಗಟ್ಟಿಯಾದ ಕಾವ್ಯ ರಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಹೊಸ ಪೀಳಿಗೆಯ ಬರಹಗಾರರು ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸುರೇಶ ಜಾಧವ ಮಾತನಾಡಿ, ‘ಚಿಕ್ಕ ಮತ್ತು ಚೊಕ್ಕದಾದ ಕವನಗಳು ಹೃದಯಕ್ಕೆ ನಾಟುತ್ತವೆ. ಕಥೆಗಳು ಬದುಕಿನ ಹಂದರವನ್ನು ಹೆಣೆಯುತ್ತವೆ. ಯುವ ಕವಿಗಳು ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಬೇಕು’ ಎಂದರು.

ಕವಿಗಳು ಕವನ ವಾಚನ ಮಾಡಿದರು. ಚಿಂತಕಿ ಉಮಾ ಗಚ್ಚಿನಮನಿ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ ಹಾಗೂ ಪ್ರಭುಲಿಂಗ ಮೂಲಗೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.