ADVERTISEMENT

ಬೈಕ್‌ಗಳ ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:20 IST
Last Updated 22 ಫೆಬ್ರುವರಿ 2020, 11:20 IST

ಕಲಬುರ್ಗಿ: ಇಲ್ಲಿನ ಅಫಜಲಪುರ ರಸ್ತೆಯಲ್ಲಿರುವ ಕಡಣಿ ಕ್ರಾಸ್ ಹತ್ತಿರ ಶುಕ್ರವಾರ ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿ ಒಬ್ಬ ಸವಾರ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.

ಜೇವರ್ಗಿ ಕಾಲೊನಿಯ ನಿವಾಸಿ ಧರೆಪ್ಪ (23) ಮೃತಪಟ್ಟವರು. ಗಾಯಗೊಂಡಿರುವ ಶ್ರೀನಿವಾಸ, ಆದಿತ್ಯ, ಸ್ವರೂಪ್, ಬಾಬಾಸಾಬ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಜನ ಸ್ನೇಹಿತರು ಸೇರಿಕೊಂಡು ಗುರುವಾರ ಸಂಜೆ ಎರಡು ಬೈಕ್‌ಗಳ ಮೇಲೆ ನಗರದ ಹೊರವಲಯದ ದಾಬಾದಲ್ಲಿ ಊಟ ಮುಗಿಸಿ, ಮರಳಿ ಬರುತ್ತಿದ್ದರು. ತ್ರಿಬಲ್‌ ರೈಡ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಸಂಚಾರ ಪೋಲಿಸ್ ಠಾಣೆ -1ರಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.