ADVERTISEMENT

ಅವ್ಯವಹಾರ ತನಿಖೆಗೆ ಆಗ್ರಹ: ಶಾಸಕ ಅಜಯಸಿಂಗ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:14 IST
Last Updated 25 ಜನವರಿ 2022, 4:14 IST
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ ನಡೆದ ₹1 ಕೋಟಿ ಬೋಗಸ್ ಬಿಲ್‌ಗೆ ಸಂಬಂಧಿಸಿದಂತೆ ತನಿಖೆಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶಾಸಕ ಡಾ. ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಿದರು. ಶಿವಲಿಂಗ ಹಳ್ಳಿ, ವಿಶ್ವನಾಥ ಜಿ ಪಾಟೀಲ ಇದ್ದರು

ಯಡ್ರಾಮಿ: ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ ನಡೆದ ₹1 ಕೋಟಿ ಬೋಗಸ್ ಬಿಲ್‌ಗೆ ಸಂಬಂಧಿಸಿದಂತೆ ತನಿಖೆಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶಾಸಕ ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಪ್ಯಾಕೇಜ್ ಯೋಜನೆಯಡಿ ಮಂಜೂರಾದ ₹1 ಕೋಟಿ ಅನುದಾನವನ್ನು ಕಾಮಗಾರಿ ಮಾಡದೆ ಬಿಲ್ ಮಾಡಿಕೊಳ್ಳಲಾಗಿದೆ. ಹಳೆಯ ಸಿಸಿ ರಸ್ತೆಗಳ ಹೆಸರಿನ ಮೇಲೆ ಹಣ ಡ್ರಾ ಮಾಡಲಾಗಿದೆ. ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿದ ಎಇಇ ಹಾಗೂ ಕಿರಿಯ ಎಂಜಿನಿಯರ್ ಅವರ ಮೇಲೆ ಕ್ರಮ ಕೈಗೊಳ್ಳವಂತೆ ಆಗ್ರಹಿಸಿದರು.

ಈ ವೇಳೆ ಶಿವಲಿಂಗ ಹಳ್ಳಿ, ವಿಶ್ವನಾಥ ಜಿ ಪಾಟೀಲ, ದೇವಾನಂದ ಗುತ್ತೆದಾರ, ಸಿದ್ದುಗೌಡ ಪಾಟೀಲ, ಮಲ್ಲಯ್ಯ ಕುಕನೂರ, ಮಲ್ಲು ಎಸ್.ಬಿರಾದಾರ, ರವಿ, ಮಲ್ಲು ಬಿರಾದಾರ, ದೇವು ಎಸ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.