ADVERTISEMENT

ಕಲಬುರ್ಗಿ: ಸೇತುವೆಗೆ ಬಸವರಾಜಪ್ಪ ಅಪ್ಪ ಹೆಸರಿಡಲು ಶರಣಕುಮಾರ ಮೋದಿ ಮನವಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:31 IST
Last Updated 16 ಜುಲೈ 2021, 6:31 IST
ಶರಣಕುಮಾರ ಮೋದಿ
ಶರಣಕುಮಾರ ಮೋದಿ   

ಕಲಬುರ್ಗಿ: ನಗರದ ರಾಷ್ಟ್ರಪತಿ ಚೌಕದಿಂದ ರಾಮಮಂದಿರವರೆಗಿನ ರಸ್ತೆಯ ಮಧ್ಯದಲ್ಲಿರುವ ರೈಲ್ವೆ ಮೇಲ್ಸೇತುವೆಗೆ ಬಸವರಾಜಪ್ಪ ಅಪ್ಪಾ ಹೆಸರು ನಾಮಕರಣ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಒತ್ತಾಯಿಸಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಶರಣರ ನಾಡು ಕಲಬುರ್ಗಿಯಲ್ಲಿರುವ ಎಲ್ಲಾ ಧರ್ಮದವರ ಆರಾಧ್ಯ ದೈವ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪಾ ಸಾತ್ವಿಕರೂ, ಶರಣ ಸಂಸ್ಕೃತಿಯ ಪ್ರತಿಪಾದಕರಾಗಿದ್ದರು. ಅವರು ದಾಸೋಹದ ಮೂಲಕ ಎಲ್ಲ ಸಮುದಾಯದವರು ಒಂದೇ ಎಂದು ಹೇಳುತ್ತಿದ್ದರು. ಅವರು ವಾಸಿಸುತ್ತಿದ್ದ ನಿವಾಸ ಗೋದುತಾಯಿ ನಗರದಲ್ಲಿ ಹಾದು ಹೋಗಿರುವ ಸೇತುವೆಗೆ ಅವರ ಹೆಸರು ಇಡುವುದು ಸೂಕ್ತ ಎಂಬುದು ಎಲ್ಲರ ಒತ್ತಾಸೆಯಾಗಿದೆ. ವಿಶೇಷವಾಗಿ ಕಲಬುರ್ಗಿ ವೀರಶೈವ ಲಿಂಗಾಯತ ಸಮುದಾಯದವರು ಅಪ್ಪಾ ಅವರ ಹೆಸರನ್ನು ಮೇಲ್ಸೇತುವೆಗೆ ಇಡುವುದರ ಮೂಲಕ ಶರಣ ಸಂಸ್ಕೃತಿ ಹಾಗೂ ದಾಸೋಹ ಪರಂಪರೆಗೆ ಸಂದ ಗೌರವವಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT