ವಾಡಿ: ನಾಗಮೋಹನದಾಸ್ ಸಮಿತಿ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕ ಮತ್ತು ಬೋವಿ ವಡ್ಡರ ಸಮಾಜಕ್ಕೆ ವಿರುದ್ಧವಾಗಿದ್ದು ಸರ್ಕಾರ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಬೋವಿವಡ್ಡರ ಸಮಾಜ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
‘ಬೋವಿ ವಡ್ಡರ ಸಮಾಜ ಜನಸಂಖ್ಯೆ 2011ರಲ್ಲಿ 11.19 ಲಕ್ಷವಿತ್ತು. ಆದರೆ 2025ರ ನಾಗಮೋಹನದಾಸ್ ವರದಿ ಪ್ರಕಾರ 11.28 ಲಕ್ಷ ಎಂದು ತೋರಿಸಲಾಗಿದ್ದು, ಇದು ಸಂಪೂರ್ಣ ಆವೈಜ್ಞಾನಿಕವಾಗಿದೆ. ಇತರ ಹಿಂದುಳಿದ ಜಾತಿಗಳಿಗಿಂತಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸರ್ಕಾರಿ ನೌಕರಿಯಲ್ಲಿ ಬೋವಿ ಸಮುದಾಯ ಅತ್ಯಂತ ಹಿಂದುಳಿದಿದ್ದರೂ ಮುಂದುವರೆದ ಜಾತಿಗೆ ಸೇರಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮ ದಂಡಗುಲ್ಕರ್, ಪ್ರಧಾನ ಕಾರ್ಯದರ್ಶಿ ಹಣಮಂತ ಜಾಧವ, ಕಾರ್ಯಾಧ್ಯಕ್ಷ ಈರಣ್ಣ ರಾವುರಕರ, ರಾಮಯ್ಯ ಪೂಜಾರಿ, ಅನಿಲ ಜಾಧವ, ಮೋಹನ ವಿಟ್ಟರ್, ಹರಿ ಜಾಧವ್, ಅರ್ಜುನ ಚೌಗಲೆ, ಭೀಮಾಶಂಕರ ಭಂಕೂರು, ರಾಜು ಎಂಪುರೆ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.