ಕಲಬುರಗಿ: ‘ಡಿಜಿಟಲ್ ಕ್ರಾಂತಿ ಕ್ಲಿನಿಕಲ್ ಸಂಶೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ’ ಎಂದು ಎಸ್‌ಸಿಆರ್‌ಎಂಪಿ ಅಧ್ಯಕ್ಷ ಗುರುಪ್ರೀತ್ ಸಿಂಗ್ ಹೇಳಿದರು
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ತಾರಾದೇವಿ ರಾಂಪೂರೆ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸುಟಿಕಲ್ ಸೈನ್ಸ್ ಹಾಗೂ ಕ್ಲಿನಿಕಲ್ ರಿಸರ್ಚ್ ಅಂಡ್ ಮೆಡಿಕಲ್ ಪ್ರೊಫೆಷನಲ್ ಸೊಸೈಟಿ ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಔಷಧ ಅಭಿವೃದ್ಧಿಯಲ್ಲಿ ಸಹ ಡಿಜಿಟಲ್ ಕ್ಷೇತ್ರವು ಕಾರ್ಯವನ್ನು ವೇಗಗೊಳಿಸಿದೆ. ರೋಗಿಗಳ ಆರೋಗ್ಯವನ್ನು ಸುಧಾರಿಸುವ ಮತ್ತು ಸಂಶೋಧನೆಯನ್ನು ಹೆಚ್ಚು ಪರಿಣಾಮಕಾರಿ ಮಾಡಿ ಫಲಿತಾಂಶ ಸುಲಭವಾಗಿಸುವ ಸಾಮರ್ಥ್ಯ ನೀಡುತ್ತಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಿಜಿಟಲ್ ಯುಗ ಪ್ರಾರಂಭವಾಗಿದೆ. ರೊಬೋಟಿಕ್ ಸರ್ಜರಿ ಮಾಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರಿಯಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಾರ್ಮಾ ಕೋವಿಜಿಲನ್ಸ್ ಕನ್ಸಲ್ಟೆಂಟ್, ಕ್ಲಿನೆಕ್ಸಲ್ ಯುಕೆನ ಪೂನಮ್ ಕುಮಾರಿ, ಎಸ್‌ಸಿಆರ್‌ಎಂಪಿಯ ಮಹ್ಮದ್ ಗಯೂರ್ ಖಾನ್, ಗ್ಲೋಬಲ್ ಕ್ಲಿನಿಕಲ್ ಟ್ರೈಲ್ ಮ್ಯಾನೇಜರ್ ನಿಖಿಲ್ ಭಾನುಮತಿ, ಡಾ.ವಿವೇಕ ಗುಪ್ತಾ, ಡಾ.ಉಮಾ ಯಜಧಾನಿ, ರಿಂಪಿ ಸೈನಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಸಂಚಾಲಕರಾದ ಅನಿಲಕುಮಾರ ಮರಗೋಳ, ಸಾಯಿನಾಥ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ.ನಾಗೇಂದ್ರ ಮಂಠಾಳೆ, ಡಾ.ಮಹಾದೇವಪ್ಪ ರಾಂಪೂರೆ, ಡಾ.ಅನಿಲಕುಮಾರ ಪಟ್ಟಣ, ಡಾ.ಕಿರಣ್ ದೇಶಮುಖ್, ನಾಗಣ್ಣ ಘಂಟಿ, ಡಾ.ಗುರುಲಿಂಗಪ್ಪ ಪಾಟೀಲ್, ನಿರ್ದೇಶಕರಾದ ಅಶೋಕ್ ಕುಮಾರ್ ದಸ್ತಾಪೂರ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರಕಾಶ್ ಸರಸಂಬಿ ಸ್ವಾಗತಿಸಿದರು. ಪ್ರಾಧ್ಯಾಪಕಿ ವಾಣಿ ಬಬಲಾದಿ ನಿರೂಪಿಸಿದರು. ಬಸವರಾಜ ಬೆಂಡಗುಂಬಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.