ADVERTISEMENT

ಸಂತ್ರಸ್ತರಿಗೆ ಶೆಡ್ ಕಟ್ಟಿಸಿಕೊಟ್ಟ ವೈದ್ಯ

ಸಿಲಿಂಡರ್‌ ಸ್ಫೋಟದಲ್ಲಿ ಮನೆ ನಾಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:20 IST
Last Updated 25 ಫೆಬ್ರುವರಿ 2020, 12:20 IST
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಮನೆ ಕಳೆದುಕೊಂಡಿದ್ದ ಅಬ್ದುಲ್ ಮುಜಾವರ್ ಕುಟುಂಬಕ್ಕೆ ತುಮಕೂರಿನ ವೈದ್ಯ ಸಿದ್ಧಾರ್ಥ ಕೋಳೂರು ಅವರು ಎರಡು ಕೋಣೆಗಳ ಶೆಡ್‍ ಕಟ್ಟಿಸಿ ಹಸ್ತಾಂತರಿಸಿದರು
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಮನೆ ಕಳೆದುಕೊಂಡಿದ್ದ ಅಬ್ದುಲ್ ಮುಜಾವರ್ ಕುಟುಂಬಕ್ಕೆ ತುಮಕೂರಿನ ವೈದ್ಯ ಸಿದ್ಧಾರ್ಥ ಕೋಳೂರು ಅವರು ಎರಡು ಕೋಣೆಗಳ ಶೆಡ್‍ ಕಟ್ಟಿಸಿ ಹಸ್ತಾಂತರಿಸಿದರು   

ಅಫಜಲಪುರ: ಮಾಶಾಳ ಗ್ರಾಮದಲ್ಲಿ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಮನೆ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದ ಅಬ್ದುಲ್ ಮುಜಾವರ್ ಕುಟುಂಬಕ್ಕೆ ತುಮಕೂರಿನ ವೈದ್ಯ ಸಿದ್ಧಾರ್ಥ ಕೋಳೂರು ಅವರು ಸ್ವಂತ ಖರ್ಚಿನಿಂದ ಎರಡು ಕೋಣೆಗಳ ಶೆಡ್‍ ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.

ಮೂಲತಃ ಅಫಜಲಪುರ ತಾಲ್ಲೂಕು ಮಾಶಾಳದವರಾದ ಡಾ.ಸಿದ್ಧಾರ್ಥ ಕೋಳೂರು ಅವರು ಸುಮಾರು ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೆಡ್‌ ಹಸ್ತಾಂತರಿಸಿ ಮಾತನಾಡಿ,‘ಸಂಕಷ್ಟಕ್ಕೆ ಸಿಲುಕಿದವರಿಗೆ ಆಸರೆಯಾಗುವುದು ಮನುಷ್ಯ ಧರ್ಮ. ಮನುಷ್ಯ ಪರರಿಗೆ ಹಿತವಾಗುವಂತೆ ಬದುಕುವುದನ್ನು ಕಲಿಯಬೇಕು’ ಎಂದರು.

ಅಬ್ದುಲ್ ಮುಜಾವರ್ ಮಾತನಾಡಿ, ‘ಬಡತನದಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬೆಳೆದು ನಿಂತ ಮಗಳ ಮದುವೆ ಮಾಡಬೇಕೆಂದು ಮದುವೆ ಸಾಮಾನು ಖರೀದಿಸಿ ಮನೆಯಲ್ಲಿಟ್ಟು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದಾಗ ನಮ್ಮ ಮನೆ ಸುಟ್ಟಿದೆ. ಆದರೆ ನಮಗೆ ಪರಿಚಿತರಾಗಿರದಿದ್ದರೂ ಕೂಡ ನಮ್ಮ ಕಷ್ಟ ನೋಡಿ ವೈದ್ಯರು ನಮಗೆ ಇದ್ದ ಮನೆಗಿಂತ ಚೆನ್ನಾದ ಎರಡು ಶೆಡ್ಡಿನ ಮನೆ ನಿರ್ಮಿಸಿಕೊಟ್ಟಿದ್ದಾರೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವ ಅಧಿಕಾರಿಯಾಗಳಿ ಜನಪ್ರತಿನಿಧಿಯಾಗಲೀ ಪರಿಹಾರ ನೀಡಿಲ್ಲ ಎಂದರು

ಗ್ರಾಮದ ಮುಖಂಡರಾದ ಚಂದ್ರಾಮ ಹಾವಳಗಿ, ಮಲ್ಲು ಉನ್ನದ, ಶಂಕರಲಿಂಗ ಮೋಸಲಗಿ, ಸಿದ್ದಪ್ಪ ಅವಟಗಿ, ಅಶೋಕ ಸಾಪಳೆ, ಸಂತೋಷ ಸಲಗರ, ಸಂತೋಷ ಆಲೇಗಾಂವ, ಸಿದ್ದಾರಾಮ ಆಲೇಗಾಂವ, ಸಿದ್ದಾರಾಮ ಆಲಮೇಲ, ದ್ಯಾವಪ್ಪ ಪೂಜಾರಿ, ಗೌಸ್ ನಿಗೇವಾನ್, ಮೌಲಾಸಾಹೇಬ ಮುಲ್ಲಾ, ಆಶಾಬಿ ಅಬ್ದುಲ್ ಮುಜಾವ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.