ಕಲಬುರಗಿ: ಬಾಪುನಗರದ ಮಾಂಗರವಾಡಿಯಲ್ಲಿ ಬುಧವಾರ ನಾಯಿ ಕಡಿತದಿಂದ ಐದು ವರ್ಷದ ಬಾಲಕ ಸೇರಿ 5ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ಮಾಗರವಾಡಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿನೋದ್ ಕಾಂಬಳೆ, ಹೀರಲಾಲ್ ಕಾಳೆ, ಶಕ್ತಿ ಪಾಟೀಲ, ಗೋವಿಂದ ಪಾಟೀಲ, ಐದು ವರ್ಷದ ಬಾಲಕ ಬಾಹುಬಲಿ ಸತೀಶ್ ಸೇರಿ ಇತರು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ನಿವಾಸಿ ಅಜಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.