ಕಲಬುರಗಿ: ತಾಲ್ಲೂಕಿನ ನಂದಿಕೂರ ಗ್ರಾಮ ಪಂಚಾಯಿತಿಯಲ್ಲಿ ಸಾಹಸ ಸಂಸ್ಥೆಯ ಜೊತೆಗೂಡಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಮಹಿಳಾ ಸಂಘದ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಣೆ ಮಾಡಿ ವಿಂಗಡಿಸಿದರು. ನಂತರ ಎಸ್‌ಡಬ್ಲ್ಯುಎಂ ಘಟಕದಲ್ಲಿ ಸಂಗ್ರಹಿಸಿದ್ದ ಒಣ ತ್ಯಾಜ್ಯವನ್ನು ಗುರುವಾರ ಮಾರಾಟ ಮಾಡಲಾಯಿತು.
ಒಣ ತ್ಯಾಜ್ಯವನ್ನು ಮಾರಾಟ ಮಾಡಿದಾಗ ಒಟ್ಟು ₹ 20,597 ಆದಾಯ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ್ ಕೆ, ಪಿಡಿಒ ಸಂದೀಪ ಎಸ್. ಗುತ್ತೇದಾರ್, ರೀಟಾ, ಸಾಹಸ ಸಂಸ್ಥೆಯ ತಾಲ್ಲೂಕು ಮೇಲ್ವಿಚಾರಕ ದೇವಪ್ಪ ಆರ್ ಕನ್ನಡಗಿ, ಹಾಗೂ ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.