ADVERTISEMENT

ಕಲಬುರಗಿ: ಪ್ರತಿಕೂಲ ಹವಾಮಾನದಲ್ಲೂ ವಿಮಾನ ಸುಲಭ ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 4:45 IST
Last Updated 22 ಜುಲೈ 2022, 4:45 IST
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿರುವ ಡಿವಿಒಆರ್/ ಡಿಎಂಇ ತಂತ್ರಜ್ಞಾನ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿರುವ ಡಿವಿಒಆರ್/ ಡಿಎಂಇ ತಂತ್ರಜ್ಞಾನ   

ಕಲಬುರಗಿ: ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸಲಭವಾಗಿ ಧರಗೆ ಇಳಿಸುವಂತಹ ಸುಧಾರಿತ ಅಂತರರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ಅಳವಡಿಸುವ ಪ್ರಕ್ರಿಯೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಗತಿಯಲ್ಲಿದೆ.

‘ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೊಸ ಡಿವಿಒಆರ್/ಡಿಎಂಇ ತಂತ್ರಜ್ಞಾನ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣ ಆಗಲಿದೆ. ಈ ಸೌಲಭ್ಯವು ವಿಮಾನಗಳ‌ನ್ನು ಸುಲಭವಾಗಿ ಭೂಮಿಗೆ ಇಳಿಸಲು ನೆರವಾಗಲಿದೆ. ಇದು ವಿಮಾನಗಳಿಗೆ ಮಾರ್ಗ, ಉಪಕರಣ ಕಾರ್ಯವಿಧಾನಗಳ ಮಾಹಿತಿ ಒದಗಿಸುತ್ತದೆ’ ಎಂದು ಟ್ವೀಟ್ ಮೂಲಕ ಕಲಬುರಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಡಿವಿಒಆರ್‌/ಡಿಎಂಇ?: ಉಪಕರಣ ಆಧಾರಿತ ವಿಮಾನ ನಿಲುಗಡೆ ಸಾಧನವಾಗಿದೆ. ಡೋಪ್ಲರ್ ವೆರಿ ಹೈ ಫ್ರಿಕ್ವೆನ್ಸಿ ಒಮ್ನಿ ರೇಂಜ್(ಡಿವಿಒಆರ್‌) ಮತ್ತುಡಿಸ್ಟನ್ಸ್ ಮೆಷರಿಂಗ್ ಇನ್‌ಸ್ಟ್ರುಮೆಂಟ್ (ಡಿಎಂಇ; ದೂರ ಅಳೆಯುವ ಸಾಧನ) (ಡಿವಿಒಆರ್). ಎಂತಹುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ನಿಲ್ದಾಣದಿಂದ ವಿಮಾನ ಇರುವ ದೂರ ಮತ್ತು ಸುರಕ್ಷಿತ ಭೂಸ್ಪರ್ಶ ಬಗ್ಗೆ ರೇಡಿಯೊ ಸಂಕೇತಗಳನ್ನು ಪೈಲಟ್‌ಗೆ ರವಾನಿಸುತ್ತದೆ. ಸಿಗ್ನಲ್‌ಗಳನ್ನು ಬಳಸಿಕೊಂಡು ಪೈಲಟ್‌ ವಿಮಾನದ ಹಾರಾಟದ ಸ್ಥಾನ ಮತ್ತು ದಿಕ್ಕನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.