ADVERTISEMENT

ಭೂ ಕಂಪನ ಇನ್ನೊಂದು ತಂಡ: ಸಚಿವ ಎಸ್. ಅಂಗಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:27 IST
Last Updated 6 ಜುಲೈ 2022, 4:27 IST

ಸುಳ್ಯ: ಭೂ ಕಂಪನ ನಡೆದ ಪ್ರದೇಶಕ್ಕೆ ಇನ್ನೆರಡು ದಿನಗಳಲ್ಲಿ ಕೇಂದ್ರದ ಇನ್ನೊಂದು ತಂಡ ಬಂದು ಉನ್ನತ ಸಮೀಕ್ಷೆ ನಡೆಸಲಿದೆ ಎಂದು ಸಚಿವ ಅಂಗಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಕಂಪನದ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಲಾಗಿದೆ. ಕೇಂದ್ರದಿಂದ ಭೂಕಂಪನ ಸರ್ವೆಗೆ ತಂಡ ಬರಲಿದೆ. ಭೂ ಕಂಪನವಾಗಿರುವ ಸಂಪಾಜೆ, ಕೊಡಗು ಸಂಪಾಜೆ, ಚೆಂಬು, ಪೆರಾಜೆ, ಅರಂತೋಡು, ತೊಡಿಕಾನ ಅಸುಪಾಸಿನಲ್ಲಿ ಸರ್ವೆ ನಡೆಯಲಿದೆ. ಕಂಪನದಿಂದ ದೊಡ್ಡ ಸಮಸ್ಯೆ ಆಗಿಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನಿರಂತರ ನೂರು ಮಿಮಿ ಮಳೆ:

ADVERTISEMENT

ಭೂಕಂಪನ ಆಗಿರುವ ಪ್ರದೇಶದಲ್ಲಿ ಐದು ದಿನಗಳಿಂದ ನಿರಂತರ ಮಳೆ ಆಗುತ್ತಿದ್ದು, ಪ್ರತಿದಿನ ನೂರು ಮಿ.ಮೀ. ಮಳೆ ದಾಖಲಾಗಿದೆ. ನದಿ, ಹಳ್ಳ, ತೋಡುಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ನೆರೆ ತುಂಬಿದೆ. ಕೃಷಿ ತೋಟ ಮತ್ತು ಸುಮಾರು 25 ಮನೆಗಳಿಗೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.