ADVERTISEMENT

ಕರ್ಚಕೇಡ ಗ್ರಾ.ಪಂ. ಮತದಾನಕ್ಕೆ ಸರತಿ ಸಾಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 11:30 IST
Last Updated 27 ಡಿಸೆಂಬರ್ 2021, 11:30 IST
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕರ್ಚಕೇಡ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ಮಹಿಳೆಯರು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕರ್ಚಕೇಡ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ಮಹಿಳೆಯರು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು   

ಚಿಂಚೋಳಿ: ತಾಲ್ಲೂಕಿನ ಕರ್ಚಖೇಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರು ಉದ್ದನೆಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

1396 ಮತದಾರರಿಗೆ ಒಂದೇ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಹಕ್ಕು ಚಲಾಯಿಸಲು ಮತದಾರರು ಸಾಲುಗಟ್ಟಿ ನಿಂತು ಮಧ್ಯಾಹ್ನ ಮತ ಚಲಾಯಿಸಿದರು.

ತಾಲ್ಲೂಕಿನ ಗರಗಪಳ್ಳಿ, ಕರ್ಚಖೇಡ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಬಿರುಸಿನ ಮತದಾನ ನಡೆಯಿತು. ಗರಗಪಳ್ಳಿ ಗ್ರಾ.ಪಂ. ನಲ್ಲಿ 6 ಮತಗಟ್ಟೆಗಳು, ಕರ್ಚಖೇಡ ಗ್ರಾ.ಪಂ. 4 ಮತಗಟ್ಟೆಗಳನ್ನು ತೆರೆಯಲಾಗಿದೆ. ಕರ್ಚಖೇಡ 13, ಗರಗಪಳ್ಳಿ 16 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನ 2.30ರ ವೇಳೆಗೆ ಶೇ 65 ಮತದಾನವಾಗಿದೆ.

ADVERTISEMENT

ಮತಗಟ್ಟೆಗಳ ಪರಿಶೀಲನೆ: ಮತದಾನದ ಕೇಂದ್ರಗಳಿಗೆ ಬೆಳಿಗ್ಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಿಲ ರಾಠೋಡ, ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಚುನಾವಣಾಧಿಕಾರಿ ಮಲ್ಲಿಕಾರ್ಜುನ ಪಾಲಾಮೂರ, ನಾಗೇಶ ಭದ್ರಶೆಟ್ಟಿ ಪರಿಶೀಲಿಸಿದರು. ಶಾಂತಿಯುತ ಮತದಾನ ನಡೆಯಲು ಮತದಾರರು ಸಹಕರಿಸಬೇಕು ಎಂದು ಕೋರಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.