ADVERTISEMENT

ಎಲೆಕ್ಟ್ರಿಕಲ್ ಸಾಮಗ್ರಿ ಕಳ್ಳತನ; ಇಬ್ಬರ ಬಂಧನ

ನಿಂಬರ್ಗಾ ಠಾಣೆ ಪೊಲೀಸರಿಂದ ₹ 3.91 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 8:52 IST
Last Updated 7 ಜುಲೈ 2021, 8:52 IST
ನಿಂಬರ್ಗಾ ಠಾಣೆಯ ಪೊಲೀಸರು ಬಂಧಿಸಿರುವ ಆರೋಪಿಗಳು
ನಿಂಬರ್ಗಾ ಠಾಣೆಯ ಪೊಲೀಸರು ಬಂಧಿಸಿರುವ ಆರೋಪಿಗಳು   

ಕಲಬುರ್ಗಿ: ಭಾರಿ ಬೆಲೆಬಾಳುವಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಆಳಂದ ತಾಲ್ಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಅವರಿಂದ ₹ 3.91 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ ₹ 1.27 ಲಕ್ಷ ಮೌಲ್ಯದ ಪ್ಲಾಸ್ಮಾ ಕಟಿಂಗ್ ಮಷಿನ್, ₹ 64 ಸಾವಿರ ಮೌಲ್ಯದ ಗಿಯರ್ ಬಾಕ್ಸ್, 25,984 ಮೌಲ್ಯದ ಎಲ್‌ಇಡಿ ಲೈಟ್ ಫಿಟ್ಟಿಂಗ್ ಮಟೀರಿಯಲ್ಸ್, ₹ 3,830 ಮೌಲ್ಯದ ಟ್ಯೂಬ್‌ಲೈಟ್, ₹ 4,400 ಮೌಲ್ಯದ ಎಲ್‌ಇಡಿ ಬಲ್ಬ್, ₹ 5 ಸಾವಿರ ಮೌಲ್ಯದ ಡೀಸೆಲ್, ₹ 10 ಸಾವಿರ ಮೌಲ್ಯದ ಅಹುಜಾ ಕಂಪನಿಯ ಎಂಪ್ಲಿಫೈರ್, ಎರಡು ಮೋಟರ್ ಸೈಕಲ್ ಸೇರಿದಂತೆ ₹ 3.91 ಲಕ್ಷದ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಎಸ್., ನಿಂಬರ್ಗಾ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಬಸವರಾಜ, ಸುವರ್ಣಾ, ಕಾನ್‌ಸ್ಟೆಬಲ್‌ಗಳಾದ ಶಿವಾಜಿ, ಮೆಹಬೂಬ್ ಶೇಖ್, ಚಂದ್ರಶೇಖರ, ಮಲ್ಲಿಕಾರ್ಜುನ ಗೋಟೂರ, ಬಸವರಾಜ ಪೂಜಾರಿ, ಸುಧಾಕರ, ಬದ್ರೊದ್ದೀನ್, ಗುರುಲಿಂಗಯ್ಯ ಸ್ವಾಮಿ, ಶರಣಬಸಪ್ಪ ಕೋಳಶೆಟ್ಟಿ, ಲಕ್ಷ್ಮಿಪುತ್ರ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.