ADVERTISEMENT

ಕಲಬುರಗಿ| ಆಟೊದಲ್ಲಿ ಸಾಗಿಸುತ್ತಿದ್ದ 813 ಗ್ರಾಂ ಒಣ ಗಾಂಜಾ ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 12:22 IST
Last Updated 2 ಅಕ್ಟೋಬರ್ 2022, 12:22 IST
ಕಲಬುರಗಿ ಹೊರವಲಯದ ಜಾಫರಾಬಾದ್ ಬಳಿಯ ರಾಣೇಶಪೀರ್ ದರ್ಗಾ ಬಳಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿರುವುದು
ಕಲಬುರಗಿ ಹೊರವಲಯದ ಜಾಫರಾಬಾದ್ ಬಳಿಯ ರಾಣೇಶಪೀರ್ ದರ್ಗಾ ಬಳಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿರುವುದು   

ಕಲಬುರಗಿ: ಜಾಫರಾಬಾದ್ ಬಳಿಯ ರಾಣೇಶ ‍‍ಪೀರ್ ದರ್ಗಾ ಬಳಿ ಮಾರಾಟಕ್ಕಾಗಿ ಆಟೊದಲ್ಲಿ ಸಾಗಿಸುತ್ತಿದ್ದ 823 ಗ್ರಾಂ ಒಣಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿ ರಾಜು ನಾಟೇಕರ್ ಎಂಬಾತನನ್ನು ಮಾದಕ ದ್ರವ್ಯ ಸಾಗಾಟ ನಿಞೇಧ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಾಫರಾಬಾದ್‌ನ ಎಸ್‌.ಎಂ. ಕೃಷ್ಣಾ ಕಾಲೊನಿಯ ದರ್ಗಾ ಬಳಿಯ ರಸ್ತೆಯಲ್ಲಿ ಆಟೊದಲ್ಲಿ ಗಾಂಜಾ ಇರಿಸಿಕೊಂಡಿದ್ದ ರಾಜುವನ್ನು ವಲಯ–2ರ ಅಬಕಾರಿ ನಿರೀಕ್ಷಕ ಸುಭಾಷ್ ಎಂ. ಕೋಟಿ ಹಾಗೂ ಸಿಬ್ಬಂದಿಯಾದ ಅಬಕಾರಿ ಉಪನಿರೀಕ್ಷಕರಾದ ದೊಡ್ಡಪ್ಪ ಹೆಬಳೆ, ಅಣ್ಣಪ್ಪ ನವಲೆ, ನರೇಂದ್ರಕುಮಾರ್ ಎಸ್. ಹೊಸಮನಿ, ಅಬಕಾರಿ ಕಾನ್‌ಸ್ಟೆಬಲ್‌ಗಳಾದ ರಾಜೇಂದ್ರನಾಥ ಮೇಳಕುಂದಿ, ಆಸಿಫ್ ಇಕ್ಬಾಲ್, ಚಂದ್ರಶೇಖರ, ಚನ್ನಪ್ಪ ಸಾಹು, ಮೊಹಮ್ಮದ್ ಗುಲಾಂ ರಿಜ್ವಾನ್, ಪ್ರದೀಪ, ವಿನೋದ ಕಟವಟೆ ಇದ್ದರು.

ಗಾಂಜಾ ಹಾಗೂ ಆಟೊ ಸೇರಿದಂತೆ ₹ 68,500 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.