ADVERTISEMENT

ಐವರಿಗೆ ‘ಧೈರ್ಯನಿಧಿ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 13:41 IST
Last Updated 22 ಜೂನ್ 2020, 13:41 IST
ಕಲಬುರ್ಗಿಯಲ್ಲಿ ಈಚೆಗೆ ಐವರು ಸಾಧಕರಿಗೆ ಡಿ.ವಿ.ಪಾಟೀಲ ಸ್ಮರಣಾರ್ಥ ‘ಧೈರ್ಯನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರ್ಗಿಯಲ್ಲಿ ಈಚೆಗೆ ಐವರು ಸಾಧಕರಿಗೆ ಡಿ.ವಿ.ಪಾಟೀಲ ಸ್ಮರಣಾರ್ಥ ‘ಧೈರ್ಯನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರ್ಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಡಿ.ವಿ.ಪಾಟೀಲ ಸ್ಮರಣಾರ್ಥ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಈಚೆಗೆ ಐವರಿಗೆ ‘ಧೈರ್ಯನಿಧಿ’ ‍ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಎಸ್.ಎಂ.ಧುಲಂಗೆ, ಡಾ.ಅಮೃತಪ್ಪ ಅಣೂರ, ಶರಣು ಪಪ್ಪಾ, ಜಯಶ್ರೀ ಎಚ್. ದೊಡ್ಮನಿ, ಉದಯಕುಮಾರ ಸಾಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್. ಪಾಟೀಲ ಮಾತನಾಡಿ, ‘ತಮ್ಮ ತ್ಯಾಗ ಮತ್ತು ಸೇವೆಯ ಮೂಲಕ ಸರ್ವ ಜನಾಂಗದ ಜನರಲ್ಲಿ ಉತ್ತಮ ಬೆಳಕನ್ನು ಕೊಟ್ಟವರು ಡಿ.ವಿ.ಪಾಟೀಲ. ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಅನುಕರಣೀಯ’ ಎಂದರು.‌

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲಮ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಲಿಂಗಾಯತರಿಗೆ ಡಿ.ವಿ. ಪಾಟೀಲ ಅವರು ಧೈರ್ಯದ ನಿಧಿ ಆಗಿದ್ದರು. ತಮ್ಮ ವೈಯಕ್ತಿಕ ಬದುಕಿಗಿಂತ ಸಮಾಜದವರ ಹಿತವನ್ನೇ ಸದಾ ಕಾಲ ಬಯಸುತ್ತಿದ್ದರು’ ಎಂದರು.

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಬಸವೇಶ್ವರ ಸಹಕಾರ ಬ್ಯಾಂಕಿನ ನಿರ್ದೇಶಕಿ ಸುಶೀಲಾಬಾಯಿ ಡಿ.ವಿ.ಪಾಟೀಲ, ಉಪಾಧ್ಯಕ್ಷ ಎಂ.ಡಿ.ಪಾಟೀಲ, ಜಿಲ್ಲಾ ವೀರಶೈವ ಮಹಾಸಭಾ ಯುವ ಘಕಟದ ಅಧ್ಯಕ್ಷ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ, ವಿಜಯಕುಮಾರ ಪಾಟೀಲ ಸೇಡಂ, ಶಿವರಾಜ ಅಂಡಗಿ, ಮಹಾಂತೇಶ ಪಾಟೀಲ, ಭುವನೇಶ್ವರಿ ಹಳ್ಳಿಖೇಡ, ಪ್ರಭವ ಪಟ್ಟಣಕರ್, ಶಿವಾನಂದ ಮಠಪತಿ, ಎಸ್.ಎಂ.ಪಟ್ಟಣಕರ್ ವೇದಿಕೆ ಮೇಲಿದ್ದರು.

ಇದೇ ವೇಳೆ ಹಲವು ಕೊರೊನಾ ವಾರಿಯರ್ಸ್‌ಗಳನ್ನು ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.