ಸಿಡಿಲು (ಸಾಂದರ್ಭಿಕ ಚಿತ್ರ )
ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ (70) ಮಂಗಳವಾರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮಧ್ಯಾಹ್ನ 2ರ ಸಮಯದಲ್ಲಿ ಮಳೆ ಬರುತ್ತಿರುವಾಗ ಹೊರಗಿದ್ದ ಹಸುಗಳನ್ನು ಶೆಡ್‌ನೊಳಗೆ ಕಟ್ಟಿ ನಂತರ ಮರದ ಕೆಳಗೆ ನಿಂತುಕೊಂಡಾಗ ಸಿಡಿಲು ಬಡಿದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯ: ಮೃತಪಟ್ಟ ರೈತನಿಗೆ ಸರ್ಕಾರ ಹೆಚ್ಚಿನ ಪರಿಹಾರವನ್ನು ನೀಡಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಭಾಗಪ್ಪ ಪಾಟೋಳಿ ಹಾಗೂ ಉಪಾಧ್ಯಕ್ಷ ಇರ್ಫಾನ್ ಜಮಾದಾರ, ಮಾಜಿ ಉಪಾಧ್ಯಕ್ಷ ಬಿಸ್ಮಿಲ್ಲಾ ಬಿ. ಚೌದ್ರಿ ಅವರು ಶಾಸಕ ಎಂ. ವೈ. ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.