ADVERTISEMENT

ರೈತರ ಆದಾಯ ದುಪ್ಪಟ್ಟು ಮಾಡುವ ನಿರ್ಣಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 7:25 IST
Last Updated 20 ಸೆಪ್ಟೆಂಬರ್ 2021, 7:25 IST
ನವ ಕರ್ನಾಟಕ ರೈತ ಸಂಘದ ಕಾರ್ಯಕಾರಿಣಿ ಸಭೆಯನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ಉದ್ಘಾಟಿಸಿದರು. ಸುರೇಶ ಗುತ್ತೇದಾರ, ಮುಖಂಡರಾದ ಸೂಗುರಯ್ಯ ಸ್ವಾಮಿ, ಪ್ರಕಾಶ ಜಕಾತೆ, ಎಂ.ಬಿ. ಜಗದೀಶ, ಮಲ್ಲಿಕಾರ್ಜುನ ಭಾರತಿ ಪೋತೆ, ಅಮರನಾಥ ಝಳಕಿ, ಸಂಜಯ, ಸಿದ್ರಾಮ ಪಾಟೀಲ, ಬಸವರಾಜ, ಶರಣಪ್ಪ ಜೈನ್ ಇದ್ದರು

ಕಲಬುರ್ಗಿ: ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ನಗರದಲ್ಲಿ ಭಾನುವಾರ ನಡೆದ ನವ ಕರ್ನಾಟಕ ರೈತ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಸಂಘಟನೆಯ 30 ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು, ನಾಲ್ಕು ಕಂದಾಯ ವಿಭಾಗದ ಅಧ್ಯಕ್ಷರು, ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಸಿ. ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಕನಿಷ್ಠ ದರದಲ್ಲಿ ಬೀಜ ಗೊಬ್ಬರ ‍ಪೂರೈಸಬೇಕು. ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಗೊಳಿಸಬೇಕು. ಸರಿಯಾಗಿ ಸಮಯಕ್ಕೆ ವಿಮೆ ಹಣ ಬರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಮಕ್ಕಳಿಗೆ ವಿವಿಧ ಯೋಜನೆಗಳಲ್ಲಿ ಮೀಸಲಾತಿ ನೀಡಬೇಕು. ರೈತ ಉತ್ಪಾದಕ ಕಂಪನಿ ಆರಂಭಿಸಿ ರೈತರಿಗೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಸಿಗುವಂತೆ ಮಾಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ADVERTISEMENT

ಸಂಘದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ರಾಜುಗೌಡ ಸ್ವಾಗತಿಸಿದರು. ಶಿಲ್ಪಾ ಪ್ರಾರ್ಥನಾ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.