ADVERTISEMENT

13ರಿಂದ ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 12:48 IST
Last Updated 11 ಫೆಬ್ರುವರಿ 2019, 12:48 IST

ಕಲಬುರ್ಗಿ: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಫೆ.13ರಿಂದ 17ರ ವರೆಗೆ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ’ ಕುರಿತು ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ.

ಯುವ ಸಂಶೋಧಕರು ಮತ್ತು ಕನ್ನಡ ಅಧ್ಯಾಪಕರಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಪಠ್ಯಗಳ ಅಧ್ಯಯನ ಮತ್ತು ಬೋಧನೆ ಬಗ್ಗೆ ತರಬೇತಿ ನೀಡುವುದು ಕಮ್ಮಟದ ಉದ್ದೇಶ. ಪಿಎಚ್.ಡಿ ಪದವೀಧರರು, ಸಂಶೋಧನಾ ವಿದ್ಯಾರ್ಥಿಗಳು, ಯುವ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಸೇರಿದಂತೆ 60 ಜನರು ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳುವರು.

13ರಂದು ಬೆಳಿಗ್ಗೆ 10 ಗಂಟೆಗೆ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಕಮ್ಮಟವನ್ನು ಉದ್ಘಾಟಿಸುವರು. ಹಿರಿಯ ವಿದ್ವಾಂಸ ಪ್ರೊ.ಬಸವರಾಜ ಕಲ್ಗುಡಿ ಆಶಯ ನುಡಿಗಳನ್ನಾಡುವವರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸುವರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಾಸ್ತಾವಿಕವಾಗಿ ಮಾತನಾಡುವರು.

ADVERTISEMENT

ಐದು ದಿನಗಳ ಕಮ್ಮಟದಲ್ಲಿ ವಿದ್ವಾಂಸರಾದ ಪ್ರೊ.ರಹಮತ್ ತರಿಕೇರೆ, ಪ್ರೊ.ಶಾಂತಿನಾಥ ದಿಬ್ಬದ, ಪ್ರೊ.ಮೇಟಿ ಮಲ್ಲಿಕಾರ್ಜುನ, ಪ್ರೊ.ನಟರಾಜ್ ಬೂದಾಳು, ಪ್ರೊ.ಸಬಿತಾ ಬನ್ನಾಡಿ, ಪ್ರೊ.ಬಿ.ಗಂಗಾಧರ, ಪ್ರೊ.ಲಿಂಗಣ್ಣ ಗೋನಾಳ, ಪ್ರೊ.ಬಸವರಾಜ ಸಾದರ, ಪ್ರೊ.ದೇವರ ಕೊಂಡಾರೆಡ್ಡಿ ವಿಷಯ ಮಂಡಿಸುವರು.

ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಸಮಾರೋಪ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.