ಬಂಧನ (ಸಾಂದರ್ಭಿಕ ಚಿತ್ರ)
ಕಲಬುರಗಿ: ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮೊಬೈಲ್‌ಗಳ ಕಳ್ಳತನ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 14 ಮೊಬೈಲ್‌ಗಳು ಬುಧವಾರ ಜಪ್ತಿ ಮಾಡಿಕೊಂಡಿದ್ದಾರೆ.
ಮಿಲ್ಲತ್ ನಗರದ ಮಹಮದ್ ಅಬ್ಬಾಸ್ (22), ಮಹಿಬೂಬ್ ನಗರದ ಮಹಮದ್ ಜುಬೇರ್ (19), ನಯಾ ಮೊಹಲ್ಲಾದ ಖಾಜಾ ಮೈನುದ್ದೀನ್ ಇನಾಮದಾರ್ (23) ಮತ್ತು ಮೊಮಿನಪುರದ ಮಹಿಬೂಬ್ ಪಾಶಾ (39) ಬಂಧಿತ ಆರೋಪಿಗಳು. ವಿವಿಧ ಕಂಪನಿಗಳ ₹42 ಸಾವಿರ ಮೌಲ್ಯದ 14 ಮೊಬೈಲ್‌ಗಳು ಹಾಗೂ ₹25 ಸಾವಿರ ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್‌ಐ ಶಿವಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ರವೀಂದ್ರ ಕುಮಾರ್, ಸುನಿಲ್‌ಕುಮಾರ್, ಅಶೋಕ, ಕಾನ್‌ಸ್ಟೆಬಲ್‌ಗಳಾದ ವಿಶ್ವನಾಥ, ಯಲ್ಲಪ್ಪ, ಅಶೋಕ ಕಟಕೆ, ಶ್ರೀಶೈಲ್, ನಾಗರಾಜ, ಜಾಕೀರ್ ಹುಸೇನ್ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.