ADVERTISEMENT

ಗಡಿಕೇಶ್ವಾರ: ವಿಜ್ಞಾನಿಗಳ ಸಮ್ಮುಖದಲ್ಲಿಯೇ ಭೂಕಂಪನ ದಾಖಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 9:06 IST
Last Updated 17 ಅಕ್ಟೋಬರ್ 2021, 9:06 IST
ವಿಜ್ಞಾನಿಗಳ‌ ತಂಡ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ಪರಿಶೀಲನೆ ನಡೆಸಿತು
ವಿಜ್ಞಾನಿಗಳ‌ ತಂಡ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ಪರಿಶೀಲನೆ ನಡೆಸಿತು   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ವಿಜ್ಞಾನಿಗಳ ಸಮ್ಮುಖದಲ್ಲಿಯೇ ಭೂಕಂಪನ ದಾಖಲಾಯಿತು.

ಭಾನುವಾರ ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಶಶಿಧರ, ಡಾ. ಸುರೇಶ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೋಶದ ಭೂಕಂಪ ವಿಜ್ಞಾನಿಗಳಾದ ಡಾ. ರಮೇಶ ದಿಕ್ಪಾಲ್, ಡಾ. ಅಭಿನಯ ಹಾಗೂ ಕಲಬುರಗಿಯ ಶರಣ ಶಿರಸಗಿಯ ಭೂಕಂಪ ಮಾಪನ ಕೇಂದ್ರದ ಸಹಾಯಕ ವಿಜ್ಞಾನಿ ಅಣವೀರಪ್ಪ ಬಿರಾದಾರ ಹಾಗೂ ತಹಶೀಲ್ದಾರ ಅಂಜುಮ್ ತಬಸ್ಸುಮ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಉಮೇಶ ಬಿರಾದಾರ, ವಿಜಯಪುರದ ರಾಕೇಶ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಿಯಾಜ್ ಮತ್ತು ವಿಜಯಪುರ ಜಿಲ್ಲೆಯ ಕೊಲ್ಹಾರ ತಹಶೀಲ್ದಾರ್ ಅವರು ಇದ್ದಾಗಲೇ ಭೂಮಿಯಿಂದ ಸದ್ದು ಕೇಳಿ ಬಂದಿತು.‌

ಗಡಿಕೇಶ್ವಾರ ಗ್ರಾಮದಲ್ಲಿ ‌ಸಿಸ್ಮೊಮೀಟರ್ ಅಳವಡಿಸಿರುವುದು

ಅದೇ ಕ್ಷಣ ಗ್ರಾಮದ ಗ್ರಾ.ಪಂ. ಕಟ್ಟಡದಲ್ಲಿ ಹೈದರಾಬಾದನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವತಿಯಿಂದ ಸಿಸ್ಮೊ ಮೀಟರ್ ಅಳವಡಿಸಲಾಗಿತ್ತು. ಅದರಲ್ಲಿ ಲಘು ಕಂಪನದ ದಾಖಲಾಗಿದೆ. ಇದರ ತೀವ್ರತೆ ಒಂದಕ್ಕಿಂತ ಕಡಿಮೆ ಎಂದು ವಿಜ್ಞಾನಿ ಡಾ. ಶಶಿಧರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.