ADVERTISEMENT

‘ಮಾರ್ಕ್ಸ್‌ವಾದಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಘೋಷ್‌’

ಶಿವದಾಸ ಘೋಷ್‌ 49ನೇ ಸ್ಮರಣ ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:15 IST
Last Updated 7 ಆಗಸ್ಟ್ 2025, 6:15 IST
ಕಲಬುರಗಿಯ ಎಸ್‌ಯುಸಿಐ ಪಕ್ಷದ ಕಚೇರಿಯಲ್ಲಿ ಶಿವದಾಸ ಘೋಷ್‌ ಅವರ ಸ್ಮರಣ ದಿನ ಆಚರಿಸಲಾಯಿತು
ಕಲಬುರಗಿಯ ಎಸ್‌ಯುಸಿಐ ಪಕ್ಷದ ಕಚೇರಿಯಲ್ಲಿ ಶಿವದಾಸ ಘೋಷ್‌ ಅವರ ಸ್ಮರಣ ದಿನ ಆಚರಿಸಲಾಯಿತು   

ಕಲಬುರಗಿ: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ, ಮಾರ್ಕ್ಸ್‌ವಾದಿ ಚಿಂತಕ ಹಾಗೂ ಎಸ್‌ಯುಸಿಐ (ಕಮ್ಯುನಿಸ್ಟ್)‌ ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವದಾಸ ಘೋಷ್‌ ಅವರ 49ನೇ ಸ್ಮರಣ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ವಿ.ಎನ್.‌ ರಾಜಶೇಖರ, ‘ಶಿವದಾಸ ಘೋಷ್‌ ಅವರು ಎಳೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜೀರಹಿತ ಪಂಥದ ಹೋರಾಟಗಾರರಾಗಿದ್ದರು. ಅವರು ಜೈಲಿನಲ್ಲಿದ್ದಾಗಲೇ ನಮಗೆ ದೊರಕುವ ಈ ರಾಜಕೀಯ ಸ್ವಾತಂತ್ರ್ಯವು ಕೇವಲ ಈ ದೇಶದ ಉಳ್ಳವರಿಗೆ ದೊರಕುತ್ತದೆ. ಆದರೆ ಈ ದೇಶದ ಸಂಪತ್ತನ್ನು ತಮ್ಮ ಬೆವರು-ರಕ್ತ ಸುರಿಸಿ ಸೃಷ್ಟಿಸುವ ಕಾರ್ಮಿಕರು-ರೈತರು ಹಾಗೂ ದುಡಿಯುವ ಜನರಿಗಲ್ಲ ಎಂಬುದನ್ನು ಮನಗಂಡರು. ಭಾರತದಲ್ಲಿ ಮಾರ್ಕ್ಸ್‌ವಾದಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದರು’ ಎಂದರು. 

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ವಿ. ನಾಗಮ್ಮಾಳ್‌, ಎಸ್. ಎಂ.‌ ಶರ್ಮಾ, ಮಹೇಶ ನಾಡಗೌಡ, ಡಾ. ಸೀಮಾ ದೇಶಪಾಂಡೆ, ಈಶ್ವರ, ರಾಧಾ, ತುಳಜಾರಾಮ ಮತ್ತಿತರರು ಇದ್ದರು. ಪಕ್ಷದ ಸ್ಥಳೀಯ ಸಮಿತಿಯ ಸದಸ್ಯ ಹಣಮಂತ ಎಸ್. ಎಚ್. ಕಾರ್ಯಕ್ರಮ ನಿರ್ವಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.