ಸಾವು (ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಜಿಲ್ಲೆಯ ಬೋಳೇವಾಡ ಸಮೀಪದ ಸೇತುವೆ ಬಳಿ ಆಟೊ ರಿಕ್ಷಾವೊಂದು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕಿ ಅಂಜಲಿ ಬಸಣ್ಣ ದಂಡೋತಿ (4) ಮೃತಪಟ್ಟಿದ್ದಾಳೆ.
ಚಿತ್ತಾಪುರ ತಾಲ್ಲೂಕಿನ ಪೇಠಶಿರೂರ ಗ್ರಾಮದ ಬಸಣ್ಣ ದಂಡೋತಿ ತಮ್ಮ ಆಟೊದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಇಟಗಾ ಅಹ್ಮದಾಬಾದ್ ಗ್ರಾಮದಲ್ಲಿ ಬಸಣ್ಣ ಅವರ ಸಹೋದರಿ ಮನೆಯ ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಅದನ್ನು ಮುಗಿಸಿ ಬಸಣ್ಣ ಕುಟುಂಬದೊಂದಿಗೆ ಪೇಠಶಿರೂರಗೆ ಹೊರಟ್ಟಿದ್ದ ವೇಳೆ ಅವಘಡ ನಡೆದಿದೆ.
ಈ ಕುರಿತು ಕಲಬುರಗಿಯ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.