ADVERTISEMENT

ಸಂತ್ರಸ್ತರಿಗೆ ನೆರವಾದ ಸರ್ಕಾರಿ ನೌಕರರು

ಅಫಜಲಪುರ, ಜೇವರ್ಗಿ ತಾಲ್ಲೂಕಿನ ವಿವಿಧ ಕಾಳಜಿ ಕೇಂದ್ರಗಳಿಗೆ ಅಗತ್ಯ ವಸ್ತುಗಳ ರವಾನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:18 IST
Last Updated 22 ಅಕ್ಟೋಬರ್ 2020, 14:18 IST
ಕಲಬುರ್ಗಿ ಜಿಲ್ಲೆಯ ಸರ್ಕಾರಿ ನೌಕರರು ಪ್ರವಾಹ ಸಂತ್ರಸ್ತರಿಗೆ ಕೊಡಮಾಡಿದ ಸಾಮಗ್ರಿಗಳನ್ನು ವಿತರಣೆಗೆ ಡಾ.ಪಿ.ರಾಜಾ ಗುರುವಾರ ಚಾಲನೆ ನೀಡಿದರು
ಕಲಬುರ್ಗಿ ಜಿಲ್ಲೆಯ ಸರ್ಕಾರಿ ನೌಕರರು ಪ್ರವಾಹ ಸಂತ್ರಸ್ತರಿಗೆ ಕೊಡಮಾಡಿದ ಸಾಮಗ್ರಿಗಳನ್ನು ವಿತರಣೆಗೆ ಡಾ.ಪಿ.ರಾಜಾ ಗುರುವಾರ ಚಾಲನೆ ನೀಡಿದರು   

ಕಲಬುರ್ಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ವೈಯಕ್ತಿಕ ದೇಣಿಗೆಯಿಂದ ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೀಡಲಾದ ಅವಶ್ಯಕ ವಸ್ತುಗಳ ಕಿಟ್ ವಿತರಣೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಅವರು ಗುರುವಾರ ಹಸಿರು ನಿಶಾನೆ ತೋರಿಸಿದರು.

ಮೂಲ ಸೌಕರ್ಯಗಳ ಕಿಟ್ ಹೊಂದಿರುವ ಐದು ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಜಿಲ್ಲೆಯ ಸರ್ಕಾರಿ ನೌಕರರು ಪ್ರವಾಹ ಸಂತ್ರಸ್ತರಿಗೆ ಸಹಾಯಕ್ಕೆ ಸ್ಪಂದಿಸುವ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದು ಸಂತಸ ತಂದಿದೆ. ಗುರುವಾರಸುಮಾರು 1000 ಕಿಟ್‌ಗಳನ್ನು ಅಫಜಲಪುರ ಮತ್ತು ಜೇವರ್ಗಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ನೌಕಕರ ಸಂಘದ ಪದಾಧಿಕಾರಿಗಳೇ ಖುದ್ದಾಗಿ ಹೋಗಿ ವಿತರಿಸಲಿದ್ದಾರೆ. ಇದು ಸಮಾಜಕ್ಕೆ ಮಾದರಿ‘ ಎಂದರು.

ಸಂಘದ ಜಿಲ್ಲಾಘಟಕದ ದಅಧ್ಯಕ್ಷ ರಾಜು ಲೇಂಗಟಿ ಮಾತನಾಡಿ, ‘ಭೀಕರ ಪ್ರಹಾದಿಂದ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿ ದಂಡೆಯ ಗ್ರಾಮಸ್ಥರು ಮನೆ ಕಳೆದಕೊಂಡು ತ್ತರಿಸಿದ್ದಾರೆ. ಅವರ ನೆರವಿಗೆ ಧಾವಿಸಬೇಕೆಂಬ ಅಭಿಲಾಷೆಯಿಂದ ಒಂದು ಚಿಕ್ಕ ಅಳಿಲು ಸೇವೆಯಾಗಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಬ್ಲ್ಯಾಂಕೆಟ್, ಮಾಸ್ಕ್, ಬಿಸ್ಕತ್, ಬಾತ್ ಸೋಪ್, ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಟೂತ್ ಪೇಸ್ಟ್, ಬ್ರಶ್, ಸೊಳ್ಳೆಬತ್ತಿ, ಜಂಡುಬಾಮ್ ಸೇರಿದಂತೆ ಇನ್ನಿತರ 20 ವಸ್ತುಗಳನ್ನು ಕಿಟ್ ಹೊಂದಿದೆ’ ಎಂದರು.

ADVERTISEMENT

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಬ್ದುಲ್ ಅಜೀಮ್, ಉಪಾಧ್ಯಕ್ಷರಾದ ಎಂ.ಬಿ.ಪಾಟೀಲ, ಚಂದ್ರಕಾಂತ ಏರಿ, ಅಣ್ಣಾರಾವ ಹಾಬಾಳಕರ್, ಪ್ರಧಾನ ಕಾರ್ಯದರ್ಶಿ ವೆಂಕಟರಾವ ಇಟಗಿ, ಖಜಾಂಚಿ ಸತೀಷ ಕೆ. ಸಜ್ಜನ್, ರಾಜ್ಯ ಪರಿಷತ್ ಸದಸ್ಯರಾದ ಹಣಮಂತರಾಯ ಬಿ. ಗೋಳಸಾರ, ಗಣೇಶ ಕಮ್ಮಾರ, ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ಚಿತ್ತಾಒಉರ ತಾಲ್ಲೂಕು ಅಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕಿಟ್ ವಿತರಣೆಯ ಉಸ್ತುವಾರಿ ಉದಯಕುಮಾರ ಮೋದಿ, ಜಂಟಿ ಕಾರ್ಯದರ್ಶಿ ಜಮೀಲ್, ಪ್ರಚಾರ ಸಮಿತಿ ಕಾರ್ಯದರ್ಶಿ ರವಿ ಮಿರಸ್ಕರ್, ಸಂಘದ ಸದಸ್ಯರಾದ ನಿಜಲಿಂಗಪ್ಪ ಕೋರಳ್ಳಿ, ರಾಜಕುಮಾರ ಸಾಲಿಮಠ, ಗುರುಲಿಂಗಪ್ಪ ಪಾಟೀಲ, ಶಿವಕುಮಾರ, ಅಶೋಕ ಶಾಬಾದಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ್ ಅಧ್ಯಕ್ಷ ಹಣಮಂತ ಮರಡಿ, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.