ADVERTISEMENT

ಕನ್ನಡ ಭಾಷೆ, ಸಂಸ್ಕೃತಿಗೆ ಅವಸಾನವಿಲ್ಲ: ಪ್ರಸಾದ್

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 36ನೇ ಅಂತರ್‌ ವಿ.ವಿ. ದಕ್ಷಿಣ–ಪೂರ್ವ ವಲಯ ಯುವಜನೋತ್ಸವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:30 IST
Last Updated 28 ಜನವರಿ 2023, 6:30 IST
ಗುಲಬರ್ಗಾ ವಿ.ವಿ.ಯಲ್ಲಿ 36ನೇ ಅಂತರ್ ವಿ.ವಿ. ದಕ್ಷಿಣ–ಪೂರ್ವ ವಲಯದ ಯುವಜನೋತ್ಸವಕ್ಕೆ ನಟ ಸುಚೇಂದ್ರ ಪ್ರಸಾದ್‌ ಡೊಳ್ಳು ಬಾರಿಸುವುದರ ಮೂಲಕ (ಎಡಬದಿ) ಚಾಲನೆ ನೀಡಿದರು. ಮಹಿಳಾ ವಿ.ವಿ. ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ, ಗುಲಬರ್ಗಾ ವಿ.ವಿ. ಕುಲಪತಿ ಪ್ರೊ.ದಯಾನಂದ ಅಗಸರ, ಪ್ರೊ. ರಾಜನಾಳಕರ ಲಕ್ಷ್ಮಣ, ಡಾ. ಬಿ. ಶರಣಪ್ಪ, ಪ್ರೊ.ವಿ.ಟಿ. ಕಾಂಬಳೆ, ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಇದ್ದರು
ಗುಲಬರ್ಗಾ ವಿ.ವಿ.ಯಲ್ಲಿ 36ನೇ ಅಂತರ್ ವಿ.ವಿ. ದಕ್ಷಿಣ–ಪೂರ್ವ ವಲಯದ ಯುವಜನೋತ್ಸವಕ್ಕೆ ನಟ ಸುಚೇಂದ್ರ ಪ್ರಸಾದ್‌ ಡೊಳ್ಳು ಬಾರಿಸುವುದರ ಮೂಲಕ (ಎಡಬದಿ) ಚಾಲನೆ ನೀಡಿದರು. ಮಹಿಳಾ ವಿ.ವಿ. ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ, ಗುಲಬರ್ಗಾ ವಿ.ವಿ. ಕುಲಪತಿ ಪ್ರೊ.ದಯಾನಂದ ಅಗಸರ, ಪ್ರೊ. ರಾಜನಾಳಕರ ಲಕ್ಷ್ಮಣ, ಡಾ. ಬಿ. ಶರಣಪ್ಪ, ಪ್ರೊ.ವಿ.ಟಿ. ಕಾಂಬಳೆ, ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಇದ್ದರು   

ಕಲಬುರಗಿ: ‘ಸಂಸ್ಕೃತಿಯ ಮೇಲ್ಪಂಕ್ತಿಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ. ಹೀಗಾಗಿ ಕನ್ನಡ ಸಂಸ್ಕೃತಿಗೆ ಅವಸಾನವಿಲ್ಲ. ಅವಸಾನವಿರುವುದು ವಿಕೃತಿಗೆ’ ಎಂದು ಚಲನಚಿತ್ರ ನಟ ಸುಚೇಂದ್ರ ಪ್ರಸಾದ್‌ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್‌ ಸಭಾಂಗಣದಲ್ಲಿ ಶುಕ್ರವಾರ 36ನೇ ಅಂತರ್‌ ವಿಶ್ವವಿ ದ್ಯಾಲಯ ದಕ್ಷಿಣ–ಪೂರ್ವ ವಲಯ ಯುವ­­ಜ­ನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವೀಕಾರಾರ್ಹ ಆಗದಿರುವುದನ್ನು ತೊಡೆಯುವುದೇ ಸಂಸ್ಕೃತಿ. ಎಲ್ಲ ಮನಸ್ಸುಗಳಲ್ಲಿ ಸಂಸ್ಕೃತಿ ಅಡಗಿದೆ. ಸಂಸ್ಕೃತಿ ಹೀನರು ಪಶುವಿಗೆ ಸಮಾನ. ಮುಕ್ತಿ ಮಾರ್ಗ ತೋರುವುದು ಸಂಸ್ಕೃತಿ’ ಎಂದರು.

ADVERTISEMENT

‘ಭಾಷೆ ಸಂವಹನ ಸಾಧನ ಮಾ ತ್ರವಲ್ಲ, ಅದು ಸಂಸ್ಕೃತಿ ವಾ ಹಕ. ಏಕತೆ ಸಾಧಿಸುವ ಸರಕು ನಮ್ಮ ಲ್ಲಿದೆ. ಹಾಗಾಗಿ ಕಲಾದೇವಿಗೆ ಭಾಷೆ ಯ ಗಡಿಯಿಲ್ಲ. ‌ಸಂಸ್ಕೃತಿ ಹರಿಯುವ ನೀರು. ಅದು ಪಾಲ್ಗೊಳ್ಳುವಿಕೆ, ಸಹಭಾಗಿತ್ವದಿಂದ ಮಾತ್ರ ಬರುತ್ತದೆ’ ಎಂದು ತಿಳಿಸಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ
ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾ ಡಿ, ‘ಪ್ರತಿಭೆಗಳ ಅನಾವರಣಕ್ಕೆ ಯುವಜನೋತ್ಸವ ವೇದಿಕೆ
ಕಲ್ಪಿಸುತ್ತದೆ. ಭಾರತದ ಭವಿಷ್ಯ ಯುವ ಜನರ ಕೈಯಲ್ಲಿದೆ. ಹಾಗಾಗಿ ಯು ವಜ ನತೆಗೆ ಭಾವನಾತ್ಮಕ ಸ್ಥಿರತೆ ಮುಖ್ಯ. ತರಗತಿ ಪಾಠ ಅಷ್ಟೇ ಮುಖ್ಯ ಅಲ್ಲ’ ಎಂದರು.

‘ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವುದೂ ಮುಖ್ಯ. ಕಲಾ ಪ್ರಕಾರಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ­­­ ಕೌಶಲ ಗಳು ಬೆಳೆಯುತ್ತವೆ.­­ ಪಠ್ಯಪೂರಕ
ಚಟುವಟಿಕೆ ಹೆಚ್ಚಾದಂತೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ’
ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ‘ವೈಶಿಷ್ಟ್ಯದಲ್ಲಿ ಏಕತೆ ಭಾರತದ ವಿಶಿಷ್ಟತೆ. ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ’
ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಜ್ಞಾನಗಂಗಾ ಎಂಬ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ನವದೆಹಲಿಯ ಭಾರ ತೀಯ ವಿಶ್ವವಿದ್ಯಾಲಯಗಳ ಸಂಘದ ಮಹಾಕಾರ್ಯದರ್ಶಿ ಡಾ.ಬಲ್ಜಿತ್‌ ಸಿಂಗ್‌ ಸೆಖೊನ್‌, ಬನಾರಸ್‌ ವಿ.ವಿ.ಯ ಪ್ರೊ.ಬಾಲು, ಗುಲಬರ್ಗಾ ವಿ.ವಿ. ಸಿಂಡಿಕೇಟ್‌ ಸದಸ್ಯ ವಿ.ಟಿ.ಕಾಂಬಳೆ, ವಿದ್ಯಾವಿಷಯಕ ಪರಿಷತ್‌ ಸದಸ್ಯ ಬಸವ ರಾಜ ಪವಾರ, ಕುಲಸಚಿವ ಡಾ.ಬಿ.ಶರಣಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಾಳಕರ್‌ ಲಕ್ಷ್ಮಣ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಕೆ.ಲಿಂಗಪ್ಪ ಸೇರಿದಂತೆ ಛತ್ತೀಸಗಡ, ತೆಲಂಗಾಣ, ಬೆಂಗಳೂರು, ಧಾರವಾಡ, ತುಮಕೂರು, ದಾವಣಗೆರೆ ಸೇರಿದಂತೆ ಮೂರು ರಾಜ್ಯಗಳ 28 ವಿವಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.