ಕಮಲಾಪುರ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹46.20 ಲಕ್ಷ ಮೌಲ್ಯದ ಗುಟ್ಕಾವನ್ನು ಬೆಳಕೋಟಾ ಕ್ರಾಸ್ ಬಳಿ ಕಮಲಾಪುರ ಪೊಲೀಸರು ಶುಕ್ರವಾರ ಜಪ್ತಿ ಮಾಡಿಕೊಂಡಿದ್ದಾರೆ.
ಲಾರಿ ಚಾಲಕ ಮಹಾರಾಷ್ಟ್ರದ ಭೀಡ್ ಜಿಲ್ಲೆ ಪಟೋದಾ ತಾಲ್ಲೂಕಿನ ವಾಣಿವಾಡಾ ಗ್ರಾಮದ ಶರತ ಭಾಸ್ಕರ ಎವಲೆ ಎಂಬಾತನನ್ನು ಬಂಧಿಸಲಾಗಿದೆ. 'ಗೋವಾ 1000' ಗುಟ್ಕಾದ 9.24 ಲಕ್ಷ ಪೌಚ್‌ಗಳನ್ನು ತುಂಬಿದ್ದ 240 ಚೀಲಗಳಿದ್ದವು. ‘ಕುಸಲಮ ಗ್ರಾಮದ ಅಜಿತ ಪವಾರ ಎಂಬುವವರ ಸೂಚನೆಯಂತೆ ಕಲಬುರಗಿಯ ಅಕ್ಬರ್ ಅವರ ಬಳಿ ಗುಟ್ಕಾ ತಂದಿದ್ದು, ಮಹಾರಾಷ್ಟ್ರದ ಭೀಡ್ ನಗರಕ್ಕೆ ಕೊಂಡ್ಯೊಯ್ಯಳಾಗುತ್ತಿತ್ತು ಎಂದು ಚಾಲಕ ತಿಳಿಸಿದ್ದಾಗಿ’ ಪೊಲೀಸರು ಹೇಳಿದ್ದಾರೆ.
ಸಿಪಿಐ ವಿ.ನಾರಾಯಣ, ಸಿಬ್ಬಂದಿ ಕುಪೇಂದ್ರ, ರಾಜಶೇಖರ ನಾಶಿ, ಮಸ್ತಾನ, ಅಶೋಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.