ADVERTISEMENT

ಪೂರ್ವಭಾವಿ ಸಭೆ: ಜ.4ರಂದು ಕಲಬುರಗಿಗೆ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 3:06 IST
Last Updated 4 ಜನವರಿ 2022, 3:06 IST
ದೇವೇಗೌಡ
ದೇವೇಗೌಡ   

ಕಲಬುರಗಿ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಜ.4 ಹಾಗೂ 5ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಂಗಳವಾರ ವಿಮಾನದ ಮೂಲಕ ನಗರಕ್ಕೆ ಆಮಿಸುವ ಅವರು, ಬೆಳಿಗ್ಗೆ 11 ಗಂಟೆಗೆ ಚಿಂಚೋಳಿಗೆ ತೆರಳಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಮರಳಿ ನಗರಕ್ಕೆ ಬರುವ ಅವರು, ರಾಜ್ಯಮಟ್ಟದ ಪತ್ರಕರ್ತರ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುವರು.ಜ. 5ರಂದು ಸೇಡಂ ಪಟ್ಟಣಕ್ಕೆ ತೆರಳಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು.

ಪೂರ್ವಭಾವಿ ಸಭೆ: ದೇವೇಗೌಡ ಅವರ ಪ್ರವಾಸದ ಹಿನ್ನೆಲೆಯಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.

ADVERTISEMENT

ಮುಖಂಡರಾದ ಅಲೀಂ ಇನಾಮದಾರ್, ಬಾಲರಾಜ ಗುತ್ತೇದಾರ, ಕೃಷ್ಣರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.