ADVERTISEMENT

ಕಲಬುರಗಿಯಲ್ಲಿ ಅತ್ಯಧಿಕ 40.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:33 IST
Last Updated 28 ಮಾರ್ಚ್ 2024, 14:33 IST
ಬಿಸಿಲಿನ ಝಳ ಹೆಚ್ಚಿದ ಹಿನ್ನೆಲೆಯಲ್ಲಿ ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೈಕ್‌ ಮೇಲೆ ಏರ್ ಕೂಲರ್‌ ಒಯ್ಯುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್
ಬಿಸಿಲಿನ ಝಳ ಹೆಚ್ಚಿದ ಹಿನ್ನೆಲೆಯಲ್ಲಿ ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೈಕ್‌ ಮೇಲೆ ಏರ್ ಕೂಲರ್‌ ಒಯ್ಯುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್   

ಕಲಬುರಗಿ: ಜಿಲ್ಲೆಯಲ್ಲಿ ತಾಪಮಾನ ದಿನೇ ದಿನೇ ಏರುತ್ತಿದ್ದು, ಗುರುವಾರ ರಾಜ್ಯದಲ್ಲಿ ಅತ್ಯಧಿಕ 40.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಲಬುರಗಿಯಲ್ಲಿ ದಾಖಲಾಗಿದೆ.

ಬೆಳಿಗ್ಗೆ 8ರಿಂದಲೇ ಬಿಸಿಲಿನ ಅನುಭವ ಆರಂಭವಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಪ್ರಖರತೆ ಹೆಚ್ಚಿರುತ್ತದೆ. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ ಇತ್ತು. ಉಳಿದಂತೆ ಬಾಗಲಕೋಟೆಯಲ್ಲಿ 40.2, ಚಿಕ್ಕನಹಳ್ಳಿಯಲ್ಲಿ 39.9, ಕೊಪ್ಪಳದಲ್ಲಿ 39.2, ಗದಗದಲ್ಲಿ 38.6, ವಿಜಯಪುರದಲ್ಲಿ 38.5 ಮತ್ತು ರಾಯಚೂರಿನಲ್ಲಿ 38.4 ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ಎರಡು ದಿನ ಕಲಬುರಗಿ, ಬಾಗಲಕೋಟೆ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶಾಖದ ಅಲೆಗಳ (ಹೀಟ್‌ ವೇವ್) ಸಾಧ್ಯತೆಯಿದೆ. ಸಾರ್ವಜನಿಕರು ಮಧ್ಯಾಹ್ನ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು. ಬಿಸಿಲಿನಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ADVERTISEMENT
ಕಲಬುರಗಿಯಲ್ಲಿ ಗುರುವಾರ ಬಿಸಿಲಿನ ಪ್ರಖರತೆಯಿಂದ ರಕ್ಷಣೆ ಪಡೆಯಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಮಹಿಳೆಯರು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.