ADVERTISEMENT

ಕಲಬುರ್ಗಿ: ನಗರದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 7:20 IST
Last Updated 5 ಸೆಪ್ಟೆಂಬರ್ 2021, 7:20 IST
ಕಲಬುರ್ಗಿಯ ಸರ್ದಾರ್ ವಲ್ಲಭಭಾಯಿ ವೃತ್ತದ ಬಳಿ ಶನಿವಾರ ರಾತ್ರಿ ಸುರಿಯುವ ಮಳೆಯಲ್ಲೇ ವಾಹನಗಳು ಸಾಗಿದವು-ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರ್ಗಿಯ ಸರ್ದಾರ್ ವಲ್ಲಭಭಾಯಿ ವೃತ್ತದ ಬಳಿ ಶನಿವಾರ ರಾತ್ರಿ ಸುರಿಯುವ ಮಳೆಯಲ್ಲೇ ವಾಹನಗಳು ಸಾಗಿದವು-ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರ್ಗಿ: ವಾರದಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿಯಿತು. ಬಿರುಸಿನಿಂದ ಕೂಡಿದ ಮಳೆ ಹನಿಗಳಿಂದಾಗಿ ಕೆಲವೇ ಹೊತ್ತಿನಲ್ಲಿ ರಸ್ತೆ, ಚರಂಡಿಯಲ್ಲಿ ನೀರು ಹರಿಯಲಾರಂಭಿಸಿತು.

ನಗರದ ಸಾರಿಗೆ ಸದನ, ಹಳೇ ಜೇವರ್ಗಿ ಅಂಡರ್‌ಪಾಸ್, ಕುಸನೂರ ರಸ್ತೆ, ತಾರಫೈಲ್, ಜನತಾ ಕಾಲೊನಿಯ ಹಲವೆಡೆ ನೀರಿನಿಂದಾವೃತವಾಗಿತ್ತು. ಬಿಸಿಲಿನ ತಾಪ ಕಡಿಮೆಯಾಗಿದ್ದರೂ ಧಗೆ ಹೆಚ್ಚಾಗಿತ್ತು. ಕಲಬುರ್ಗಿ ಹೊರವಲಯದ ಗ್ರಾಮಗಳಲ್ಲಿಯೂ ರಾತ್ರಿ ಉತ್ತಮ ಮಳೆ ಸುರಿದಿದೆ.

ಇದೇ 4ರಿಂದ ಆರಂಭವಾದ ಮಳೆ ಸೆ 11ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದು, ಈ ಸಂಬಂಧ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು, ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಉಂಟಾದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸೂಚನೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.