ADVERTISEMENT

ಉಕ್ಕಿ ಹರಿದ ಹಳ್ಳ: ಸಂಪರ್ಕ ಕಡಿತ, ಮನೆ ಕುಸಿತ

ಬಳವಡ್ಗಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 3:31 IST
Last Updated 16 ಸೆಪ್ಟೆಂಬರ್ 2020, 3:31 IST
ವಾಡಿ ಸಮೀಪದ ದೇವಾಪುರ ಸಂಪರ್ಕಿಸುವ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಓಡಾಡದಂತೆ ಸ್ಥಳೀಯ ಪಿಎಸ್ಐ ವಿಜಯಕುಮಾರ ಬಾವಗಿ ಬ್ಯಾರಿಕೇಡ್ ಹಾಕಿದರು
ವಾಡಿ ಸಮೀಪದ ದೇವಾಪುರ ಸಂಪರ್ಕಿಸುವ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಓಡಾಡದಂತೆ ಸ್ಥಳೀಯ ಪಿಎಸ್ಐ ವಿಜಯಕುಮಾರ ಬಾವಗಿ ಬ್ಯಾರಿಕೇಡ್ ಹಾಕಿದರು   

ವಾಡಿ: ಸೋಮವಾರ ರಾತ್ರಿ ಸುರಿದ ಮಳೆಯಿಂದ ನಾಲವಾರ ವಲಯದ ವಿವಿಧ ಕಡೆ ಹಳ್ಳಗಳು ಉಕ್ಕಿ ಹರಿದಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಡಿದೆ.

ರಾಷ್ಟ್ರೀಯ ಹೆದ್ದಾರಿ– 150ರ ಮೂಲಕ ಹಲಕರ್ಟಿ ಗ್ರಾಮದ ಬಳಿ ಹಾದು ಹೋಗುವ ಹಳ್ಳ ಉಕ್ಕಿ ಹರಿದಿದ್ದರಿಂದ ಸುತ್ತಲಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಹೋಗಿ ಅಪಾರ ಪ್ರಮಾಣದ ತೊಗರಿ, ಹತ್ತಿ ಬೆಳೆ ನಷ್ಟವಾಗಿದೆ.

ಕೊಂಚೂರು, ಬಳವಡ್ಗಿ, ಕಡಬೂರು, ದೇವಾಪೂರ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರಿಂದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದ ನೂರಾರು ಜನರ ಪರದಾಟಕ್ಕೆ ಕಾರಣವಾಯಿತು.

ADVERTISEMENT

ಬಳವಡ್ಗಿ ಗ್ರಾಮದ ಹಲವು ಬಡಾವಣೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ದವಸ ದಾನ್ಯಗಳು ಹಾಳಾದ ವರದಿಯಾಗಿದೆ. ನೀರು ನುಗ್ಗಿದ್ದರಿಂದ ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ಮನೆಗಳಿಗೆ ನುಗ್ಗಿ ಮಳೆ ನೀರನ್ನು ಹೊರಹಾಕಲು ಬಳವಡ್ಗಿಯ ಏಲಾಂಬಿಕಾ ದೇವಸ್ಥಾನದ ಸುತ್ತಲೂ ಮಳೆ ನೀರು ನಿಂತಿದೆ.

ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ ಸುರಿದ ಮಳೆಯಿಂದ ಸನ್ನತ್ತಿ ಗ್ರಾಮದಲ್ಲಿ 3 ಮನೆಗಳು ನೆಲಕ್ಕುರುಳಿವೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.