ಕಲಬುರಗಿ ನಗರದಲ್ಲಿ ಶುಕ್ರವಾರ ಧಾರಾಕಾರ ಮಳೆಯಿಂದ ಮರವೊಂದು ಧರೆಗೆ ಉರುಳಿರುವುದು
ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ತಡರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಶಾಹಬಜಾರ ಸಮೀಪ ಬೇವಿನ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ, ಆಟೊ ಸೇರಿ ಕೆಲ ವಾಹನಗಳಿಗೆ ಹಾನಿಯಾಗಿದೆ.
ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಶುಕ್ರವಾರ ಬೆಳಿಗ್ಗೆ ಕಚೇರಿಗೆ ಹೋಗುವ ನೌಕರರು, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಿದರು. ನಿರಂತರ ಮಳೆಯ ಜೊತೆಗೆ ಲಘುವಾಗಿ ಗಾಳಿ ಹಾಗೂ ಚಳಿಯ ವಾತಾವರಣ ಇದ್ದು, ಬಹುತೇಕ ಜನರು ಮಳೆಗಳನ್ನು ಬಿಟ್ಟು ಹೊರಗೆ ಬರಲು ಹಿಂದೇಟು ಹಾಕಿದರು. ಸಮಯದ ಬೆಳಿಗ್ಗೆ 10.30 ಕಳೆದರೂ ಜನ ರಸ್ತೆಗಳು ಬಹುತೇಕ ಜನರಿಲ್ಲದೇ ಬಿಕೊ ಎಂದವು.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕಲಬುರಗಿ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಬಗೆಗೆ ವರದಿಯಾಗಿದೆ.
ಜಿಲ್ಲೆಯ ಕಾಳಗಿ, ಅಫಜಲಪುರ, ಚಿತ್ತಾಪುರ, ಚಿಂಚೋಳಿ, ಸೇಡಂ, ಶಹಬಾದ್, ಕಮಲಾಪುರ ಸೇರಿದಂತೆ ಬಹುತೇಕ ಎಲ್ಲ ತಾಲ್ಲೂಕಿನಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.